ಲಂಡನ್: ವಿಕ್ಟೋರಿಯವು 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಆತಿಥ್ಯವನ್ನು ವಹಿಸಿಕೊಳ್ಳಲಿದೆ.
ವಿಕ್ಟೋರಿಯ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಈ ಗೇಮ್ಸ್‌ನ ಪ್ರಮುಖ ಸ್ಪರ್ಧೆಗಳು ನಡೆಯಲಿದೆ. ಹೀಗಾಗಿ ಒಂಟಿ ನಗರದಲ್ಲಿ ಗೇಮ್ಸ್‌ನ ಎಲ್ಲ ಸ್ಪರ್ಧೆಗಳು ನಡೆಯುವ ಸಂಪ್ರದಾಯವನ್ನು ಮುರಿಯಲಾಗಿದೆ.
2026ರ ಮಾರ್ಚ್‌ನಲ್ಲಿ ಈ ಗೇಮ್ಸ್ ನಡೆಯಲಿದೆ. ವಿಕ್ಟೋರಿಯ ರಾಜ್ಯದ ಪ್ರಮುಖ ನಗರಗಳಾದ ಮೆಲ್ಬೋರ್ನ್, ಜೀಲಾಂಗ್, ಬೆಂಡಿಗೊ, ಬಲ್ಲಾರತ್ ಮತ್ತು ಜಿಪ್ಸ್‌ಲ್ಯಾಂಡ್‌ನಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಪ್ರತಿಯೊಂದು ನಗರವು ಕ್ರೀಡಾಗ್ರಾಮವನ್ನು ಒಳಗೊಂಡಿದೆ.
ಗೇಮ್ಸ್‌ನ ಉದ್ಘಾಟನ ಸಮಾರಂಭವು ಒಂದು ಲಕ್ಷ ಆಸನ ಸಾಮರ್ಥ್ಯದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ (ಸಿಜಿಎಫ್) ತಿಳಿಸಿದೆ.
ಈ ಗೇಮ್ಸ್‌ನ ಆರಂಭಿಕ ಪಟ್ಟಿಯಂತೆ ಟಿ20 ಕ್ರಿಕೆಟ್ ಸಹಿತ 16 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಲಿದೆ.