ಬೆಂಗಳೂರು: ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಸಂಚಾರ ಠಾಣೆ ಮತ್ತು ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯ ಕೆಲ ಮಾರ್ಗಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಎಲ್ಲೆಲ್ಲಿ ನಿಷೇಧ: ಹಳೆ ವಿಮಾನ ನಿಲ್ದಾಣ ರಸ್ತೆ, ಸುರಂಜನ್ ದಾಸ್ ರಸ್ತೆ ಜಂಕ್ಷನ್, ಟ್ರಿನಿಟಿ ಚರ್ಚ್‌ನಿಂದ ಎ.ಎಸ್.ಸಿ ಸೆಂಟರ್, ಎಂ.ಜಿ ರಸ್ತೆ, ಟ್ರಿನಿಟಿ ಚರ್ಚ್‌ನಿಂದ ವೆಬ್ಸ್ ಜಂಕ್ಷನ್, ಡಿಕಸನ್ ರಸ್ತೆ, ವೆಬ್ ಜಂಕ್ಷನ್‌ನಿಂದ ಮಣಿಪಾಲ್ ಸೆಂಟರ್, ಕಬ್ಬನ್ ರಸ್ತೆ, ಮಣಿಪಾಲ್ ಸೆಂಟರ್‌ನಿಂದ ಟಿಸಿಓ ವೃತ್ತ, ರಾಜಭವನ ರಸ್ತೆ, ಸಿಟಿಓ ವೃತ್ತದಿಂದ ರಾಜಭವನ ಜಂಕ್ಷನ್, ಎಲ್‌ಹೆಚ್‌ರಸ್ತೆ ರಾಜಭವನ ಜಂಕ್ಷನ್‌ನಿಂದ ಬಸವೇಶ್ವರವೃತ್ತ,
-ಪ್ಯಾಲೇಸ್ ರಸ್ತೆ, ಮಹಾರಾಣಿ ಅಂಡರ್ ಪಾಸ್‌ನಿಂದ ಅನಾಶ್ ಪೆಟ್ರೋಲ್ ಬಂಕ್, ಕನ್ನಿಂಗ್‌ಹ್ಯಾಂ ರಸ್ತೆ, ಅನಾಶ್ ಪೆಟ್ರೋಲ್ ಬಂಕ್‌ನಿಂದ ಚಂದ್ರಿಕಾ ಜಂಕ್ಷನ್ ವರೆಗೆ ಹಾಗೂ ಮಿಲ್ಲರ್ ರಸ್ತೆ, ಚಂದ್ರಿಕಾ ಜಂಕ್ಷನ್‌ನಿಂದ ಉದಯ ಟಿ.ವಿ.ಜಂಕ್ಷನ್‌ವರೆಗೆ, ಸ್ಟೇಷನ್ ರಸ್ತೆ, ಉದಯ ಟಿ.ವಿ.ಜಂಕ್ಷನ್‌ನಿಂದ ಕ್ವೀನ್ಸ್ ರಸ್ತೆ ಜಂಕ್ಷನ್, ಕ್ವೀನ್ಸ್ ರಸ್ತೆ, ಸ್ಟೇಷನ್ ರಸ್ತೆ ಜಂಕ್ಷನ್‌ನಿಂದ ಸಿಟಿಓ ವೃತ್ತ, ಟಿ.ಚೌಡಯ್ಯ ರಸ್ತೆ, ಕಾವೇರಿ ಜಂಕ್ಷನ್‌ನಿಂದ ರಾಜಭವನ ಜಂಕ್ಷನ್,
-ಕೆ.ಕೆ.ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್‌ನಿಂದ ಶಿವಾನಂದ ವೃತ್ತ, ರಮಣಮಹರ್ಶಿ ರಸ್ತೆ, ಕಾವೇರಿ ಜಂಕ್ಷನ್‌ನಿಂದ ಮೇಖೀ ವೃತ್ತ, ಬಳ್ಳಾರಿ ರಸ್ತೆ, ಮೇಖೀÅ ವೃತ್ತದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪ್ಯಾಲೇಸ್ ಕ್ರಾಸ್ ರಸ್ತೆ , ಏಟ್ರಿಯಾ ಹೋಟೆಲ್‌ನಿಂದ ಪ್ಯಾಲೇಸ್ ಕ್ರಾಸ್ ಜಂಕ್ಷನ್‌ವರೆಗಿನ ಎರಡು ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅಂಬೇಡ್ಕರ್ ಭವನದ ಕಾರ್ಯಕ್ರಮ: ಎಂ.ಜಯರಾಮ್ ರಸ್ತೆಯಲ್ಲಿ, ಉದಯ ಟಿ.ವಿ.ಜಂಕ್ಷನ್‌ನಿಂದ ವಸಂತನಗರ ರೈಲ್ವೆ ಕೆಳ ಸೇತುವೆವರೆಗೆ (ರಸ್ತೆಯ ದಕ್ಷಿಣ ಭಾಗಕ್ಕೆ) ತಿಮ್ಮಯ್ಯ ರಸ್ತೆ ಮತ್ತು ಟ್ಯಾಂಕ್ ಬಂಡ್ ರಸ್ತೆ, ಜಸ್ಮಾ ದೇವಿ ಭವನ ರಸ್ತೆ ಮತ್ತು ಮಹಾವೀರ್ ಜೈನ್ ಟೆಂಪಲ್ ರಸ್ತೆ, ಮುಖ್ಯ ಅರಮನೆ ಮೈದಾನದ ಮಾವಿನ ಕಾಯಿ ಮಂಡಿ ಆವರಣ, ಜಯಮಹಲ್ ರಸ್ತೆ ಮೂಲಕ ಪ್ರವೇಶ ಕಲ್ಪಿಸಲಾಗಿದೆ.
ಜ್ಞಾನಜ್ಯೋತಿ ಸಭಾಂಗಣ ಕಾರ್ಯಕ್ರಮ: ಸೆಂಟ್ರಲ್ ಕಾಲೇಜ್ ಮೈದಾನ, ವೈ.ರಾಮಚಂದ್ರ ರಸ್ತೆ (ಕನಕದಾಸ ವೃತ್ತದಿಂದ ಪ್ಯಾಲೇಸ್ ಕ್ರಾಸ್ ಜಂಕ್ಷನ್ ವರೆಗೆ ಒಂದು ಬದಿಯಲ್ಲಿ), ಪ್ರೀಡಂ ಪಾರ್ಕ್‌ನಲ್ಲಿನ ಸಿಮೆಂಟ್ ಪಾರ್ಕಿಂಗ್, ಬೆಂಗಳೂರು ಯುನಿರ್ವಸಿಟಿ ಹೆಲ್ತ್ ಸೆಂಟರ್, ಪ್ರೀಡಂ ಪಾರ್ಕ್ ಗೇಟ್ ನಂ.1 ಮಡ್ ಪಾರ್ಕಿಂಗ್, ಶೇಷಾದ್ರಿ ರಸ್ತೆ ಫೈರ್ ಬ್ರಿಗೇಡ್ ಕಚೇರಿಯಿಂದ ಮಹಾರಾಣಿ ಕಾಲೇಜ್ ಕಾಂಪೌಂಡ್‌ವರೆಗೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.