Advertisement
ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ 71 ರ ಹರೆಯದ ಜಗದೀಪ್ ಧನ್ಕರ್ ವಿರುದ್ಧ ಪ್ರತಿಪಕ್ಷಗಳ ಕಡೆಯಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ನಾಯಕಿ ಕರ್ನಾಟಕದ ಮಾರ್ಗರೇಟ್ ಆಳ್ವ ಅವರು ಸೋಲು ಅನುಭವಿಸಿದ್ದಾರೆ.
Related Articles
Advertisement
ಲೋಕಸಭೆಯಲ್ಲಿ 36 ಸಂಸದರನ್ನು ಹೊಂದಿರುವ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ, ಚುನಾವಣಾ ಪ್ರಕ್ರಿಯೆಯಿಂದಲೇ ಹೊರಗುಳಿದಿತ್ತು. ಆಮ್ ಆದ್ಮಿ ಪಾರ್ಟಿ ಮತ್ತು ಜೆಎಂಎಂ ಪ್ರತಿಪಕ್ಷ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದವು.
ಬಿಜೆಪಿಯ 394 ಸೇರಿದಂತೆ ಎನ್‌ಡಿಎ 441 ಸಂಸದರನ್ನು ಹೊಂದಿದೆ. ಐವರು ನಾಮನಿರ್ದೇಶಿತ ಸದಸ್ಯರು ಕೂಡ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ್ದರು.
ಎನ್‌ಡಿಎಯೇತರ ಹಲವಾರು ಪಕ್ಷಗಳೂ ಧನ್ಕರ್ ಅವರನ್ನು ಬೆಂಬಲಿಸಿದ್ದರು. ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ, ಜಗನ್ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ, ಅಕಾಲಿದಳ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಬಣ ಸೇರಿ ಒಟ್ಟು 81 ಸಂಸದರ ಬೆಂಬಲ ದೊರಕಿತ್ತು.