Advertisement

ವೈಸ್‌ ಅಡ್ಮಿರಲ್‌ ಕರಮ್‌ ಬೀರ್‌ ಸಿಂಗ್‌ ಮುಂದಿನ ನೌಕಾಪಡೆ ಮುಖ್ಯಸ್ಥ

10:38 AM Mar 23, 2019 | udayavani editorial |

ಹೊಸದಿಲ್ಲಿ : ಕೇಂದ್ರ ಸರಕಾರ ಇಂದು ಶನಿವಾರ ವೈಸ್‌ ಅಡ್ಮಿರಲ್‌ ಕರಮ್‌ ಬೀರ್‌ ಸಿಂಗ್‌ ಅವರನ್ನು ಮುಂದಿನ ನೌಕಾ ಪಡೆ ಮುಖ್ಯಸ್ಥರನ್ನಾಗಿ ನೇಮಿಸಿತು.

Advertisement

ಈ ವರ್ಷ ಮೇ 31ರಂದು ಹಾಲಿ ನೌಕಾ ಪಡೆ ಮುಖ್ಯಸ್ಥ ಸುನೀಲ್‌ ಲಾಂಬಾ ಅವರ ಅಧಿಕಾರಾವಧಿ ಮುಗಿಯಲಿದ್ದು  ಆ ಬಳಿಕ ಅವರ ಸ್ಥಾನವನ್ನು ಕರಮ್‌ ಬೀರ್‌ ಸಿಂಗ್‌ ತುಂಬಲಿದ್ದಾರೆ.

ವೈಸ್‌ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌, ಪಿವಿಎಸ್‌ಎಂ, ಎವಿಎಸ್‌ಎಂ, 2017ರ ಅಕ್ಟೋಬರ್‌ 31ರಂದು ಈಸ್ಟರ್ನ್ ನೇವಲ್‌ ಕಮಾಂಡ್‌ ನ ಫ್ಲ್ಯಾಗ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಇವರು ಮಹಾರಾಷ್ಟ್ರದ ಖಡಕ್‌ವಾಸ್ಲಾ ದಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಹಳೆವಿದ್ಯಾರ್ಥಿ. 

Advertisement

Udayavani is now on Telegram. Click here to join our channel and stay updated with the latest news.

Next