Advertisement
ಒಂದು ವಾರದ ಹಿಂದೆ ಎರಡು ಕಾಡಾನೆಗಳ ನಡುವಿನ ಕಾದಾಟದಲ್ಲಿ ಭೀಮ ಎಂಬ 40 ವರ್ಷ ಪ್ರಾಯದ ಕಾಡಾನೆ ಗಾಯಗೊಂಡಿತ್ತು. ಇದಕ್ಕೆ ವೆಂಕಟೇಶ್ ಅವರಿಂದಲೇ ಅರವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಭೀಮನಿಗೆ ಗಾಯಗಳು ಹೆಚ್ಚಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅನುಮತಿ ನೀಡಿದ್ದರು. ಅದರಂತೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಗುರುವಾರ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂದರ್ಭ ದುರಂತ ನಡೆದಿದೆ.
ವೆಂಕಟೇಶ್ 1988ರಿಂದ ಅರಣ್ಯ ಕಾವಲುಗಾರ ( ಫಾರೆಸ್ಟ್ ವಾಚರ್)ರಾಗಿ ದಿನಗೂಲಿಯಾಗಿ ಸೇವೆಗೆ ಸೇರಿದ್ದರು. ಆನೆಗಳ ವಿಷಯದಲ್ಲಿ ಹೆಚ್ಚು ತಜ್ಞರಾಗಿದ್ದ ಅವರು ಇದುವರೆಗೆ 100ಕ್ಕೂ ಹೆಚ್ಚು ಕಾಡಾನೆಗಳಿಗೆ ಚುಚ್ಚುಮದ್ದು ನೀಡಿದ್ದರು. ಅರುಣಾಚಲ ಪ್ರದೇಶದಲ್ಲಿ ಕಾಡಾನೆ ಹಿಡಿಯವ ಕಾರ್ಯಾಚರಣೆಯಲ್ಲೂ ವೆಂಕಟೇಶ್ ಪಾಲ್ಗೊಂಡಿದ್ದರು. ಇಲಾಖೆಯು 2013ರಲ್ಲಿ ವೆಂಕಟೇಶ್ ಅವರ ಸೇವೆಯನ್ನು ಖಾಯಂಗೊಳಿಸಿತು. 2018ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.