Advertisement

ಸದಸ್ಯತ್ವಕ್ಕೆ ವಿಟೋ ಅಧಿಕಾರ ತ್ಯಾಗ?

03:45 AM Mar 09, 2017 | Harsha Rao |

ವಿಶ್ವಸಂಸ್ಥೆ/ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪುನಾರಚನೆಯಾಗಿ, ಶಾಶ್ವತ ಸದಸ್ಯ ರಾಷ್ಟ್ರವಾಗಬೇಕೆಂದು ಪ್ರತಿಪಾದಿಸುತ್ತಿರುವ ಭಾರತ ಪ್ರಮುಖ ವಿಚಾರ ವಿಟೋ ಅಧಿಕಾರ ತ್ಯಾಗ ಮಾಡಲು ಮುಂದಾಗಿದೆ. ಇದರ ಹೊರತಾಗಿಯೂ ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ ಭಾರತಕ್ಕೆ ಸದಸ್ಯತ್ವ ನೀಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಜಿ-4 ಗುಂಪಿನ ಸದಸ್ಯ ರಾಷ್ಟ್ರಗಳಾಗಿರುವ ಬ್ರೆಜಿಲ್‌, ಜರ್ಮನಿ ಮತ್ತು ಜಪಾನ್‌ ಕೂಡ ವಿಟೋ ಬಗ್ಗೆ ತಮ್ಮ ನಿಲುವು ಸಡಿಲಗೊಳಿಸಿವೆ.

Advertisement

ಈ ಕುರಿತು ಭದ್ರತಾ ಮಂಡಳಿ ಸುಧಾರಣೆಗೆ ಸಂಬಂಧಿಸಿದ ಸಭೆಯಲ್ಲಿ ಜಿ4 ರಾಷ್ಟ್ರಗಳ ಪರವಾಗಿ ಪ್ರತಿಕ್ರಿಯಿಸಿರುವ ಭಾರತದ ಕಾಯಂ ಪ್ರತಿನಿಧಿ ಸಯ್ಯದ್‌ ಅಕºರುದ್ದಿನ್‌, “”ವಿಟೋ ಅಧಿಕಾರ ಪಡೆಯುವುದು ಮತ್ವದ ವಿಷಯವೇ ಆದರೂ, ಭದ್ರತಾ ಮಂಡಳಿಯ ಸುಧಾರಣೆ ಸಂದರ್ಭದಲ್ಲೇ ಅದನ್ನು ಬಯಸಲಾಗದು,” ಎನ್ನುವ ಮೂಲಕ ವಿಟೋ ರಹಿತ ಕಾಯಂ ಸದಸ್ಯತ್ವಕ್ಕೆ ಪರೋಕ್ಷವಾಗಿ ಸಹಮತ ಸೂಚಿಸಿದ್ದಾರೆ. 

ಅಲ್ಲದೆ “”ಈ ಮಾರ್ಗವನ್ನು ಬಿಟ್ಟರೆ ಕಾಯಂ ಸದಸ್ಯತ್ವ ಪಡೆಯಲು ಬೇರಾವುದೇ ಮಾರ್ಗಗಳಿಲ್ಲ,” ಎಂದು ಅಕºರುದ್ದಿನ್‌ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ವಿರೋಧ: ಈ ನಡುವೆ ಭದ್ರತಾ ಮಂಡಳಿ ಸುಧಾರಣೆ ವೇಳೆ ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ಖಾಯಂ ಸದಸ್ಯತ್ವ ನೀಡುವುದನ್ನು ಪಾಕಿಸ್ತಾನ ಒಳಗೊಂಡ 13 ರಾಷ್ಟ್ರಗಳ ಯುಎಫ್ಸಿ ಗುಂಪು ವಿರೋಧಿಸಿದೆ. ಆರಂಭದಿಂದಲೂ ಕಾಯಂ ಸದಸ್ಯತ್ವ ರಾಷ್ಟ್ರಗಳ ಸಂಖ್ಯೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಈ ಗುಂಪು, ಸುಧಾರಣೆ ಪ್ರಕ್ರಿಯೆಗೂ ಅಡ್ಡಗಾಲು ಹಾಕಿದೆ.

ವಿಟೋಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ. ಹೊಸ ಸದಸ್ಯರು ಮಂಡಳಿ ಸೇರುವಾಗ ಹಳೆಯ ಸದಸ್ಯರು ಹೊಂದಿರುವ ಕರ್ತವ್ಯಗಳನ್ನೂ ಹೊಂದಿರಬೇಕಾಗುತ್ತದೆ. ಹೊಸ ವಿಚಾರಗಳನ್ನೂ ಗಮನಿಸಬೇಕಾಗುತ್ತದೆ.
– ಸಯ್ಯದ್‌ ಅಕºರುದ್ದೀನ್‌, ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ

Advertisement
Advertisement

Udayavani is now on Telegram. Click here to join our channel and stay updated with the latest news.

Next