Advertisement
ಜಾನುವಾರುಗಳು ಸೇರಿದಂತೆ ಇತರ ಸಾಕು ಪ್ರಾಣಿಗಳ ಸೇವೆಯಲ್ಲಿ ತೊಡಗಿರುವ ಇಲಾಖೆಯಲ್ಲಿ ಬಂಟ್ವಾಳ ತಾಲೂಕಿಗೆ ಒಟ್ಟು ಮಂಜೂರಾದ 89 ಹುದ್ದೆಗಳಲ್ಲಿ ಕೇವಲ 18 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿದಂತೆ ಹುದ್ದೆಗಳು ಖಾಲಿ ಇವೆ. ನಿವೃತ್ತಿಯಾಗಿ ಹುದ್ದೆಗಳು ಖಾಲಿಯಾಗುತ್ತಿವೆಯೇ ಹೊರತು ಭರ್ತಿಗೆ ಸರಕಾರ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ, ಕಲ್ಲಡ್ಕ, ಮಾಣಿ, ವಿಟ್ಲದಲ್ಲಿ ಪಶು ವೈದ್ಯ ಆಸ್ಪತ್ರೆಯಿದ್ದು, ರಾಯಿ, ಸಿದ್ಧಕಟ್ಟೆ, ಮೂರ್ಜೆ, ವಗ್ಗ, ಮಾವಿನಕಟ್ಟೆ, ವಾಮದಪದವು, ಬೆಂಜನ ಪದವು, ಕುರ್ನಾಡು, ಮೂರ್ಜೆ, ಅಡ್ಯನಡ್ಕ ಹಾಗೂ ಸಂಚಾರಿ ಪಶು ಚಿಕಿತ್ಸಾಲಯಗಳಿವೆ. ಕನ್ಯಾನ, ಪರಿ ಯಲ್ತಡ್ಕ, ಪೆರ್ನೆ, ಸಜೀಪಮೂಡ, ಪಂಜಿಕಲ್ಲು, ಮೇರಮಜಲು, ಕಕ್ಯ ಪದವು, ಕುಡ್ತಮುಗೇರುಗಳಲ್ಲಿ ಪ್ರಾಥ ಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಹೀಗೆ 22 ಕಡೆ ಗಳಲ್ಲಿ ಇಲಾಖೆಯ ಕಚೇರಿಗಳಿದ್ದು, ಒಬ್ಬೊ ಬ್ಬರು ಒಂದೊಂದು ಕಡೆ ಕರ್ತವ್ಯ ನಿರ್ವ ಹಿಸಿದರೂ ಭರ್ತಿಯಾಗದ ಸ್ಥಿತಿ ಇದೆ. ಒಂದೆರಡು ವರ್ಷಗಳ ಹಿಂದೆ ಪಶುಪಾಲನ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳು ಹುದ್ದೆಗಳ ಭರ್ತಿಗಾಗಿ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದು, ಮುಂದಿನ 6 ತಿಂಗಳೊಳಗಾಗಿ ಇಡೀ ರಾಜ್ಯದಲ್ಲಿ ಇಲಾಖೆಯ ಶೇ. 50ದಷ್ಟು ಹುದ್ದೆಗಳು ಭರ್ತಿಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅದು ಅನುಷ್ಠಾನ ಆಗಿದೆಯೋ ಅಥವಾ ಇಲ್ಲವೇ ಎಂಬುದರ ಕುರಿತು ಕೂಡ ಮಾಹಿತಿ ಇಲ್ಲವಾಗಿದೆ.
Related Articles
Advertisement
ಡಿ ದರ್ಜೆ ನೌಕರರ 35 ಹುದ್ದೆಗಳಲ್ಲಿ 2 ಮಾತ್ರ ಭರ್ತಿಯಿದ್ದು, 33 ಖಾಲಿ ಇವೆ. ದ್ವಿತೀಯ ದರ್ಜೆ ಸಹಾಯಕ ಹಾಗೂ ವಾಹನ ಚಾಲಕರ ತಲಾ ಒಂದು ಹುದ್ದೆಗಳು ಭರ್ತಿ ಇವೆ.
ಇಲಾಖೆಯ ಸಿಬಂದಿಯ ಒತ್ತಡ ತಗ್ಗಿಸುವ ದೃಷ್ಟಿಯಿಂದ ಗ್ರೂಪ್ ಡಿ ನೌಕರರನ್ನು ಮಾತ್ರ ಹೊರಗುತ್ತಿಗೆಯ ಆಧಾರದಲ್ಲಿ ತೆಗೆದುಕೊಳ್ಳಲು ಅವಕಾಶವಿದ್ದು, ಕೆಲವೊಂದು ಮಂದಿ ಮಾತ್ರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿಯು ಎರಡು-ಮೂರು ಹುದ್ದೆಗಳನ್ನು ನಿಭಾಯಿಸುವ ಪರಿಸ್ಥಿತಿ ಇದೆ.
ಎಷ್ಟು ಹುದ್ದೆಗಳು ಖಾಲಿ ಬಂಟ್ವಾಳ ತಾಲೂಕಿಗೆ ಮಂಜೂರಾ ಗಿರುವ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಒಂದು ಹುದ್ದೆ ಇದ್ದು, ಅದು ಭರ್ತಿಯಾಗಿದೆ. ಮುಖ್ಯಪಶುವೈದ್ಯಾಧಿಕಾರಿ/ ಹಿರಿಯ ಪಶುವೈದ್ಯಾಧಿಕಾರಿ/ಪಶು ವೈದ್ಯಾಧಿಕಾರಿ ಒಟ್ಟು 15 ಹುದ್ದೆಗಳಲ್ಲಿ 5 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಾನುವಾರು ಅಭಿವೃದ್ಧಿ ಅಧಿಕಾರಿ ಒಂದು ಹುದ್ದೆ ಭರ್ತಿ ಇದೆ. ಜಾನುವಾರು ಅಧಿಕಾರಿ 3 ಹುದ್ದೆಗಳಲ್ಲಿ 2 ಮಾತ್ರ ಭರ್ತಿ ಇದೆ. ಚಾರ್ಜ್‌ಗಳ ಮೂಲಕ ಕರ್ತವ್ಯ ನಿಭಾವಣೆ
ಹಾಲಿ ಇರುವವರಿಗೆ 2-3 ಚಾರ್ಜ್‌ಗಳನ್ನು ನೀಡಿ ನಿರ್ವಹಣೆ ಮಾಡಲಾಗುತ್ತಿದೆ. ಬೆಳಗ್ಗೆ-ಮಧ್ಯಾಹ್ನ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಪಶುವೈದ್ಯಾಧಿಕಾರಿ ಹುದ್ದೆಗಳಿಗೆ 12 ವರ್ಷ ಸೇವಾವಧಿಯಾಗಿರುವವರು ಬೇಕಾಗುತ್ತದೆ. ಡಿ ಗ್ರೂಪ್‌ಗ್ಳಿಗೆ ಹೊರ ಗುತ್ತಿಗೆಯಲ್ಲಿ ತೆಗೆದುಕೊಳ್ಳಬಹುದಾಗಿದ್ದು, 18 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
-ಡಾ| ಎಂ.ಎಸ್.ಹರೀಶ್,
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ), ಬಂಟ್ವಾಳ – ಕಿರಣ್ ಸರಪಾಡಿ