Advertisement

ರೈತರಿಗಾಗಿ ಹಳ್ಳಿಗಳತ್ತ ಪಶು ಇಲಾಖೆ ಚಿತ್ತ

04:46 PM Sep 16, 2021 | Team Udayavani |

ಚಿಕ್ಕನಾಯಕನಹಳ್ಳಿ: ಬಹುತೇಕ ರೈತರು ಹೈನುಗಾರಿಕೆ ಹಾಗೂ ಕುರಿ ಸಾಕರಣೆಯನ್ನು ಅರ್ಥಿಕ ಭದ್ರತೆಗಾಗಿ ರೂಪಿಸಿಕೊಂಡಿದ್ದಾರೆ. ಹೀಗಾಗಿ ಪಶು ಇಲಾಖೆ ಅಗತ್ಯವಾಗಿ ರೈತರಿಗೆ ನೆರವು ಹಾಗೂ ಲಾಭದಾಯಕ ಪದ್ಧತಿಗಳನ್ನು ರೈತರಿಗೆ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಪಶು ಇಲಾಖೆ ರೈತರ ಜೊತೆಹೆಚ್ಚು ಸಂಪರ್ಕಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ಪಶು ಸಂಗೋಪನೆ ವಿರಳವಾಗುತ್ತಿದ್ದು,ಕೃಷಿಯಲ್ಲಿಯಂತ್ರಗಳಬಳಕೆಯಿಂದ ಜಾನುವಾರುಗಳು ಕಣ್ಮರೆಯಾಗುತ್ತಿವೆ.
ಹೈನುಗಾರಿಕೆಯಲ್ಲಿ ಮಾತ್ರ ಹಸುಗಳು ಕಾಣುತ್ತಿದ್ದು, ಪಶು ಸಂಗೋಪನೆ ಕಷ್ಟಕರ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ತಾಲೂಕಿನಲ್ಲಿ ಸುಮಾರು 40ರಿಂದ 45 ಸಾವಿರ ಜಾನುವಾರುಗಳಿವೆ. ಇವುಗಳಲ್ಲಿ ಹಸು, ಎತ್ತು ಹಾಗೂ ಎಮ್ಮೆ ಸೇರಿಕೊಂಡಿವೆ. ಇವುಗಳ ಕ್ರಮ ಬದ್ಧ ಪೋಷಣೆಗೆ ತಾಲೂಕಿನಲ್ಲಿ ಪಶು ಇಲಾಖೆ ಗ್ರಾಮ ವಾಸ್ತವ್ಯ, ಲಸಿಕೆ ಕಾರ್ಯಕ್ರಮ, ದನಕರುಗಳ ಮೇಳ, ಹಾಲು ಕರೆಯುವ ಸ್ವರ್ಧೆ ಹಾಗೂ ಶಿಬಿರಗಳನ್ನು ನಡೆಸುತ್ತಿರುವುದು ಪಶು ಪಾಲನೆಗೆ ಬಲಬಂದಂತಾಗಿದೆ.ಪಶುಪಾಲನೆಯನ್ನು ಲಾಭದಾಯಕವಾಗಿ ಮಾಡಲು ಪಶು ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಕರುಗಳ ಪ್ರದರ್ಶನಕ್ಕೆ ರಾಜ್ಯಮಟ್ಟದಲ್ಲಿ ಹೆಸರು:
2020-21ರ ಸಾಲಿನಲ್ಲಿ ಮುದ್ದೇನಹಳ್ಳಿ, ಶೆಟ್ಟಿಕೆರೆಹಾಗೂ ತಿಮ್ಮನಹಳ್ಳಿಗಳಲ್ಲಿಒಟ್ಟು ಮೂರು ಪ್ರದರ್ಶನಗಳನ್ನು ನಡೆಸಲಾಗಿದ್ದು, ಇವುಗಳಲ್ಲಿ ಶೆಟ್ಟಿಕೆರೆಯಲ್ಲಿ ನಡೆದ ಕರುಗಳ ಪ್ರದರ್ಶನಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಕರುಗಳು ಪ್ರದರ್ಶನದಲ್ಲಿ ಭಾಗವಹಿಸಿರುವುದು ರಾಜ್ಯ ಮಟ್ಟದಲ್ಲಿ ಹೆಸರಾಗಿದೆ. ಅಲ್ಲದೆ, ಈ ಪ್ರದರ್ಶನದಲ್ಲಿ ಹಾಲು ಕರೆಯುವ ಸ್ಪರ್ಧೆಯನ್ನು ನಡೆಸಲಾಗಿದ್ದು, 38 ಲೀಟರ್‌ ಹಾಲು ಕರೆದ ಹಸುವಿದೆ. ಪ್ರಥಮ ಬಹುಮಾನ ನೀಡಿ, ರೈತರಿಗೆ ಪ್ರೋತ್ಸಾಹ ನೀಡಿದರು.‌

ಇದನ್ನೂ ಓದಿ:ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ವೈದ್ಯರಿಂದ ಗ್ರಾಮ ವಾಸ್ತವ್ಯ: ತಾಲೂಕಿನ ಪಶುವೈದ್ಯರು ಹಾಗೂ ಸಿಬ್ಬಂದಿಗಳು ಕ್ಯಾತನಾಯಕನಹಳ್ಳಿ, ಕುರಿಹಟ್ಟಿ  ಹಾಗೂ ಸಂಗೇನಹಳ್ಳಿಗಳಲ್ಲಿ ಇಲಾಖೆ ವತಿಯಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮಾಡಲಾಗಿದ್ದು, ರೈತರೊಡನೆ ಉತ್ತಮವಾದ ಸಂಬಂಧವನ್ನು ಬೆಳೆಸಿ, ಅವರ ಮನೆ ಬಾಗಿಲಲ್ಲೇ ಇಲಾಖೆಯ ಸೇವೆಗಳನ್ನು ನೀಡುವುದು ಈ ವಾಸ್ತವ್ಯದ ಉದ್ದೇಶವಾಗಿದೆ. ಗ್ರಾಮದಲ್ಲಿನ ಜಾನುವಾರು, ಕುರಿ, ಮೇಕೆಗಳಿಗೆ ಚಿಕಿತ್ಸೆ ಹಾಗೂ ಲಸಿಕೆ ನೀಡುವ ಜೊತೆಗೆ ಹೈನುಗಾರಿಕೆಯನ್ನು ಲಾಭದಾಯಕ ಮಾಡಿಕೊಳ್ಳುವ ಬಗ್ಗೆ ನುರಿತ ವೈದ್ಯರಿಂದ
ತರಬೇತಿ ನೀಡಲಾಗುತ್ತದೆ.

Advertisement

ಮಾರ್ಚ್‌ ಒಳಗೆ ಹಲವು ಶಿಬಿರದ ಗುರಿ: ಪಶುಇಲಾಖಯಿಂದ 2020-21ರಲ್ಲಿ 14 ಶಿಬಿರ ನಡೆಸಲಾಗಿದ್ದು, 2021-22ರ ಒಳಗೆ 22ಕ್ಕೂ ಹೆಚ್ಚು
ಶಿಬಿರಗಳನ್ನು ನಡೆಸಿ,ಮೇವು ಬೆಳೆಯುವ ಬಗ್ಗೆ ತರಬೇತಿ, ವಿವಿಧ ಜಾತಿಯ ಮೇವುಗಳ ಬಗ್ಗೆ ಮಾಹಿತಿ ಹಾಗೂ ಹಸುಗಳ ಪೋಷಣೆ ‌ ಹಾಗೂ ನಿರ್ವಹಣೆ ಬಗ್ಗೆ ತಿಳಿಸಲು ಯೋಜನೆ ರೂಪಿಸಿರುವ ಬಗ್ಗೆ ಪಶು ವೈದ್ಯರು ತಿಳಿಸಿದ್ದಾರೆ.

ಸರ್ಕಾರದಿಂದ ಅನುಗ್ರಹಯೋಜನೆ ರದ್ದು
ಸರ್ಕಾರ ವಿಮೆ ರಹಿತವಾಗಿ ಕುರಿ ಮೇಕೆ ಸಾವನ್ನಪ್ಪಿದರೆ5 ಸಾವಿರಹಾಗೂ ಹಸು, ಎಮ್ಮೆ ಸಾವನ್ನಪ್ಪಿದರೆ 10 ಸಾವಿರ ರೂ., ಪರಿಹಾರವನ್ನು ನೀಡುವ ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ, ಮಾರ್ಚ್‌ 2021ರಿಂದ ಈ ಯೋಜನೆಯನ್ನು ರದ್ದುಗೊಳಿಸಿರುವುದು ರೈತರಿಗೆ ಅಘಾತವಾಗಿದೆ. ಕುರಿ ಹಾಗೂ ಹೈನುಗಾರಿಕೆಗೆ ಉತ್ತೇಜ ನೀಡುವ ಬಗ್ಗೆ ಮಾತನಾಡುವ ಸರ್ಕಾರಗಳು ಕುರಿ ಹಾಗೂ ಹೈನುಗಾರಿಕೆ ವೃತ್ತಿ ನಡೆಸಲು ಬ್ಯಾಂಕ್‌ಗಳಲ್ಲಿ ಯಾವುದೇ ಯೋಜನೆ ಹಾಗೂ ಸಾಲ ಸೌಲಭ್ಯವನ್ನು ನೀಡುವ ಯೋಜನೆಯನ್ನು ರೂಪಿಸದಿರುವುದು ರೈತರಿಗೆ ಉತ್ತೇಜನವಿಲ್ಲವಾಗಿದೆ ಎಂಬ ಆರೋಪಗಳು ಸಾರ್ವಜನಿಕರಿಂದಕೇಳಿ ಬರುತ್ತಿದೆ.

ಹೈನುಗಾರಿಕೆ ಮಾಡುವ ರೈತರು ನಿರಂತರವಾಗಿ ಪಶು ವೈದ್ಯರ ಸಂಪರ್ಕ ದಲ್ಲಿಇರಬೇಕು.ಹಸುಗಳನ್ನುಖರೀದಿಸುವಾಗ ಎಚ್ಚರಿಕೆ ಅಗತ್ಯವಿದೆ. ಹಾಲುಕರೆದು ಪರೀಕ್ಷಿಸಿ ಕೊಂಡುಕೊಳ್ಳ ಬೇಕು. ತಾಲೂಕಿನಲ್ಲಿಹೈನುಗಾರಿಕೆ ಅಭಿವೃದ್ಧಿ ಬಗ್ಗೆ ಹಾಗೂ ಹೈನುಗಾರಿಕೆಯಲ್ಲಿ ರೈತರಿಗೆ ಲಾಭ ತಂದು ಕೊಡುವ ಉದ್ದೇಶದಿಂದ ಇಲಾಖೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ.
– ಡಾ.ನಾಗಭೂಷಣ್‌, ಸಹಾಯಕ
ನಿರ್ದೇಶಕ, ಪಶು ಇಲಾಖೆ,
ಚಿಕ್ಕನಾಯಕನಹಳ್ಳಿ

-ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next