Advertisement

ಹಿರಿಯ ಪ್ರಯೋಗಶೀಲ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ವಿಧಿವಶ

01:57 PM Jan 06, 2023 | Team Udayavani |

ಮಂಗಳೂರು: ಪ್ರಸಿದ್ದ ರಂಗಕರ್ಮಿ ಗೋಪಾಲಕೃಷ್ಣ ನಾಯರಿ ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.

Advertisement

ಉಡುಪಿಯ ಸಾಲಿಗ್ರಾಮದ ಕಾರ್ಕಡ ನಿವಾಸಿಯಾಗಿದ್ದ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನ್ಯಾಷನಲ್ ಸ್ಕೂಲ್ ಆಫ್‌ ಡ್ರಾಮಾದ ಮೂಲಕ ಖ್ಯಾತರಾಗಿದ್ದ ಅವರು ರಾಷ್ಟ್ರೀಯ ಪ್ರಸಿದ್ಧಿಯ ಪ್ರಯೋಗಶೀಲ ರಂಗ ನಿರ್ದೇಶಕರಾಗಿದ್ದರು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ಸದಾ ಹೊಸತನದ ತುಡಿತ ಹೊಂದಿದ್ದು , ಅಪಾರ ರಂಗಭೂಮಿ ಮತ್ತು ಯಕ್ಷಗಾನ ಕಲಾವಿದರ ಒಡನಾಟ ಹೊಂದಿದ್ದರು ಮಾತ್ರವಲ್ಲದೆ ಅಪಾರ ಶಿಷ್ಯವರ್ಗವನ್ನೂ ಹೊಂದಿದ್ದರು.

ಇಂದು ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸನ್ಮಾನಗೊಳ್ಳಬೇಕಾಗಿತ್ತು. ಆದರೆ ವಿಧಿವಶರಾಗಿದ್ದಾರೆ.

ರಂಗಭೂಮಿಯ ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ನಿಧಾನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next