Advertisement

Pakistani Actor: ಪಾಕಿಸ್ತಾನದ ದಿಗ್ಗಜ ನಟ ತಲತ್ ಹುಸೇನ್ ನಿಧನ

06:21 PM May 26, 2024 | Team Udayavani |

ಕರಾಚಿ: ಪಾಕಿಸ್ತಾನ ಸಿನಿಮಾರಂಗದ ದಿಗ್ಗಜ ನಟ ತಲತ್ ಹುಸೇನ್(83) ಭಾನುವಾರ(ಮೇ.26 ರಂದು) ನಿಧನ ಹೊಂದಿದ್ದಾರೆ

Advertisement

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ. ಈ ವಿಚಾರವನ್ನು ಪಾಕಿಸ್ತಾನಿ ಚಲನಚಿತ್ರ ನಿರ್ದೇಶಕ ಮತ್ತು ಸಂಪಾದಕ ಅರ್ಸಲನ್ ಖಾನ್ ಎಕ್ಸ್‌ ನಲ್ಲಿ ಹೇಳಿದ್ದಾರೆ.

ಸೆಪ್ಟೆಂಬರ್ 18, 1940 ರಂದು ಜನಿಸಿದ ತಲತ್ ಹಲವಾರು ವರ್ಷಗಳಿಂದ ಖ್ಯಾತ ನಟರಾಗಿ ಪಾಕಿಸ್ತಾನಿ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದರು.

ಕಿರುತೆರೆ, ನಾಟಕಗಳು, ಚಲನಚಿತ್ರಗಳಲ್ಲಿ ಗುರುತಿಸಿಕೊಂಡಿದ್ದ ಅವರು, ʼಅರ್ಜುಮಂದ್ʼ, ʼಅನ್ಸೂʼ, ʼಬಂದಿಶ್ʼ, ʼದೇಸ್ ಪರ್ದೇಸ್ʼ, ʼತಾರಿಕ್ ಬಿನ್ ಜಿಯಾದ್ʼ, ʼಈದ್ ಕಾ ಜೋರಾʼ, ʼಫನೂನಿ ಲತೀಫೆ ಹವೈನ್ʼ ನಲ್ಲಿನ ಪಾತ್ರಗಳಿಂದಾಗಿ ಖ್ಯಾತಿ ಗಳಿಸಿದ್ದರು.

ʼಚಿರಾಗ್ ಜಲತಾ ರಹಾʼ.‌ ʼಗುಮ್ನಾಮ್ʼ ಸೇರಿದಂತೆ ಭಾರತದ ʼಆ್ಯಕ್ಟರ್‌ ಇನ್‌ ಲಾʼ, “ಸೌತೆನ್ ಕಿ ಬೇಟಿʼ ಸಿನಿಮಾದಲ್ಲೂ ನಟಿಸಿದ್ದರು.

Advertisement

ತನ್ನ ನಟನೆಯಿಂದಾಗಿ ಅವರಿಗೆ ಹತ್ತಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿತ್ತು. 1982 ರಲ್ಲಿ ಪಾಕಿಸ್ತಾನ ಸರ್ಕಾರದಿಂದ ಪ್ರೈಡ್ ಆಫ್ ಪರ್ಫಾರ್ಮೆನ್ಸ್ ಪ್ರಶಸ್ತಿ,2021 ರಲ್ಲಿ ʼಸಿತಾರಾ-ಇ-ಇಮ್ತಿಯಾಜ್ʼ (ಪಾಕಿಸ್ತಾನದ ಮೂರನೇ ಅತ್ಯುನ್ನತ ಗೌರವ ಮತ್ತು ನಾಗರಿಕ ಪ್ರಶಸ್ತಿ) ಗೌರವ ಸಂದಿದೆ.

ಲಂಡನ್ ಅಕಾಡೆಮಿ ಆಫ್ ಮ್ಯೂಸಿಕ್ ಮತ್ತು ಡ್ರಾಮಾಟಿಕ್ ಆರ್ಟ್‌ನಲ್ಲಿ ಅವರು ಅಧ್ಯಯನ ಮಾಡಿದ್ದರು. ಅಂತರರಾಷ್ಟ್ರೀಯ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲೂ ತನ್ನ ನಟನಾ ಪ್ರತಿಭೆಯನ್ನು ತೋರಿಸಿದ್ದರು.

ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಪಾಕ್‌ ಚಿತ್ರರಂಗ ಸಂತಾಪ ಸೂಚಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next