Advertisement

ಹಿರಿಯ ಸಾಹಿತಿ ಡಾ.ಸಂಗಮೇಶ ಹಂಡಗಿ ನಿಧನ

03:16 PM Sep 14, 2021 | Team Udayavani |

ಹುಬ್ಬಳ್ಳಿ: ವಚನಶ್ರೀ ಎಂದೇ ಖ್ಯಾತರಾದ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಗಿ (84 ವ) ಮಂಗಳವಾರ ನಿಧನರಾದರು.

Advertisement

ಕನ್ನಡ ಸಾಹಿತ್ಯ ಲೋಕಕ್ಕೆ 16 ಗ್ರಂಥಗಳ ಕಾಣಿಕೆ ನೀಡಿರುವ ಡಾ. ಸಂಗಮೇಶ ಹಂಡಗಿಯವರು, ಪತ್ನಿ, ಪತ್ರಕರ್ತ ಡಾ. ವೀರೇಶ ಹಂಡಗಿ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗ ಆಗಲಿದ್ದಾರೆ.

ನವಲಗುಂದದ ಶ್ರೀ ಶಂಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಪಿಎಚ್.ಡಿ ಅಧ್ಯಯನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.

ವಿಮರ್ಶಾತ್ಮಕ ಪ್ರಬಂಧಗಳಾದ ಭಕ್ತಿ ಭಕ್ತಿಮಾರ್ಗ, ಜನಪದ ಸಾಹಿತ್ಯ ಮತ್ತು ದೈವಿ ಶ್ರದ್ಧೆ ಧರ್ಮ, ಸಂಸ್ಕೃತಿ ಸೌರಭ ನುಡಿಮಿಡಿ, ಶರಣಾನುಭವ, ವಚನಕ್ರಮನ, ವಚನಮಯೂರ, ಮುಂತಾದ ವಚನಗಳು ಕಾವ್ಯಸಂಗಮ, ಕಾವ್ಯಗೌರವ, ನೆನೆದವರ ಮನದಲ್ಲಿ ಸೇರಿದಂತೆ ಅನೇಕ ಜೀವನ ಚರಿತ್ರೆಗಳನ್ನು ಅವರು ಬರೆದಿದ್ದಾರೆ.

ಕನ್ನಡ ನಾಡಿನ ಪ್ರಮುಖ ಪತ್ರಿಕೆಗಳಿಗೆ ವರದಿಗಾರ, ಮಾಮಿಡಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿ ಪತ್ರಿಕಾರಂಗದಲ್ಲೂ ಪರಿಣಿತಿ ಹೊಂದಿದ್ದ ಇವರು 2006ರಲ್ಲಿ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಜರುಗಿದ ಅಖಿಲ ಕರ್ನಾಟಕ 2ನೇ ವಚನ ಸಾಹಿತ್ಯ ಸಮ್ಮೇಳನದಲ್ಲಿ ವಚನಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

Advertisement

1994ರಲ್ಲಿ ಬಸವನ ಬಾಗೇವಾಡಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರೆ, 1999ರಲ್ಲಿ ವಿಜಯಪುರ ತಾಲೂಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next