Advertisement

ನಾಡೋಜ ಕಣವಿಗೆ ಕೆಎಸ್‌ಎನ್‌ ಪ್ರಶಸ್ತಿ

06:25 AM Nov 22, 2018 | |

ಧಾರವಾಡ: ಕೆ.ಎಸ್‌.ನರಸಿಂಹಸ್ವಾಮಿ ಟ್ರಸ್ಟ್‌ ನೀಡುವ 2018ನೇ ಸಾಲಿನ ಕೆಎಸ್‌ಎನ್‌ ಪ್ರಶಸ್ತಿಗೆ ಹಿರಿಯ ಕವಿ, ನಾಡೋಜ ಡಾ.ಚನ್ನವೀರ ಕಣವಿ ಹಾಗೂ ಕೆಎಸ್‌ಎನ್‌ ಕಾವ್ಯ ಗಾಯನ ಪ್ರಶಸ್ತಿಗೆ ಹಿರಿಯ ಗಾಯಕಿ, ಅನುರಾಧಾ ಧಾರೇಶ್ವರ ಭಾಜನರಾಗಿದ್ದಾರೆ. 

Advertisement

ತಲಾ 25 ಸಾವಿರ ರೂ.ನಗದು ಬಹುಮಾನ, ಸ್ಮರಣಿಕೆ ಒಳಗೊಂಡ ಈ ಪ್ರಶಸ್ತಿ ಪ್ರದಾನ ಸಮಾರಂಭ ಧಾರವಾಡದ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ನ.25ರಂದು ಸಂಜೆ 5:30ಕ್ಕೆ ನೆರವೇರಲಿದೆ.

ಬುಧವಾರ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್‌ ಕಾರ್ಯದರ್ಶಿ ಡಾ| ಕಿಕ್ಕೇರಿ ಕೃಷ್ಣಮೂರ್ತಿ,ಸಂಶೋಧಕ ಪ್ರೊ|ಷ.ಶೆಟ್ಟರ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಟ್ರಸ್ಟ್‌ ಅಧ್ಯಕ್ಷ ಡಾ| ನರಹಳ್ಳಿ ಬಾಲ ಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸಲಿದ್ದು, ಕವಿಯತ್ರಿ ಹೇಮಾ ಪಟ್ಟಣಶೆಟ್ಟಿ ಹಾಗೂ ವಿಮರ್ಶಕ ಶ್ರೀಧರ ಹೆಗಡೆ ಭದ್ರನ್‌ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. 

ಪ್ರಶಸ್ತಿ ಪುರಸ್ಕೃತರ ಕುರಿತು ಪರಿಚಯ ಪುಸ್ತಕಗಳು ಬಿಡುಗಡೆಗೊಳ್ಳಲಿದ್ದು, ಇವುಗಳ ಲೇಖಕರಾದ ವಿಕ್ರಮ ವಿಸಾಜಿ, ಪ್ರಜ್ಞಾ ಮತ್ತಿಹಳ್ಳಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ಕೆಎಸ್‌ನ ಕಾವ್ಯ ಗಾಯನ ನಡೆಯಲಿದ್ದು, ಶ್ರೀಕಾಂತ ಕುಲಕರ್ಣಿ, ಮಹಾನಂದ, ಚೈತ್ರ ಬೆಟಗೇರಿ, ಶ್ರೀನಿವಾಸ ಉಡುಪ ಸೇರಿದಂತೆ ತಂಡದವರಿಂದ ಗಾಯನ ಜರುಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next