Advertisement

ಕನ್ನಡ ಚಿತ್ರರಂಗದ ಹಿರಿಯ ನಟಿ, ಮಂಗಳೂರು ಮೂಲದ ಕಿಶೋರಿ ಬಲ್ಲಾಳ್ ವಿಧಿವಶ

11:09 AM Feb 19, 2020 | Nagendra Trasi |

ಉಡುಪಿ: ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಕಿಶೋರಿ ಬಲ್ಲಾಳ್ ಅವರು ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ಕಿಶೋರಿ ಬಲ್ಲಾಳ್ ಅವರು ಮೂಲತಃ ದಕ್ಷಿಣ ಕನ್ನಡದ ಮಂಗಳೂರಿನವರು. ಬಲ್ಲಾಳ್ ಅವರು 1960ರಲ್ಲಿ ಬೆಳ್ಳಿತೆರೆಗೆ ಬಂದಿದ್ದ ಇವಳೆಂಥ ಹೆಂಡತಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಸುಮಾರು ಹದಿನೈದು ವರ್ಷಗಳ ಸಿನಿ ಜೀವನದಲ್ಲಿ 72ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದರು.

ಬಾಲಿವುಡ್ ನ ಸ್ವದೇಶ ಸಿನಿಮಾದಲ್ಲಿ ಶಾರುಖ್ ಖಾನ್ ಜತೆ ಕಿಶೋರಿ ನಟಿಸಿದ್ದರು. ಭರತನಾಟ್ಯ ಕಲಾವಿದ ಶ್ರೀಪತಿ ಬಲ್ಲಾಳ್ ಅವರನ್ನು ಕಿಶೋರಿ ವಿವಾಹವಾಗಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಕಿಶೋರಿ ಬಲ್ಲಾಳ್ ಅವರು ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next