ಬೆಂಗಳೂರು: ಬಹುಅಂಗಾಂಗ ವೈಫಲ್ಯದಿಂದ ಸೋಮವಾರ ವಿಧಿವಶರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್(81ವರ್ಷ) ಅವರ ಅಂತ್ಯಕ್ರಿಯೆ ಬೈಯಪ್ಪನಹಳ್ಳಿ ಸಮೀಪದ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಯಾವುದೇ ಸರ್ಕಾರಿ ಗೌರವವಾಗಲಿ, ಯಾವುದೇ ವಿಧಿವಿಧಾನಗಳಿಲ್ಲದೆ ಅಂತ್ಯಸಂಸ್ಕಾರ ನಡೆಯಿತು.
ಕಾರ್ನಾಡ್ ಅವರ ಕೊನೆಯ ಆಸೆಯಂತೆ ಹಿರಿಯ ಪುತ್ರ ರಘು ಕಾರ್ನಾಡ್ ತಂದೆಯ ಅಂತ್ಯಕ್ರಿಯೆ ಕಾರ್ಯವನ್ನು ಮಾಡಿದರು. ಅತ್ಯಂತ ಸರಳವಾಗಿ ಅಂತಿಮ ವಿಧಾನ ಮಾಡುವ ಮೂಲಕ ಕಾರ್ನಾಡ್ ಅವರ ಅಂತ್ಯಕ್ರಿಯೆಯನ್ನು ಕುಟುಂಬವರ್ಗ ನೆರವೇರಿಸಿತ್ತು. ಯಾವುದೇ ಸರ್ಕಾರಿ ಗೌರವ ಬೇಡ ಎಂದು ಕುಟುಂಬ ವರ್ಗದವರು ತಿಳಿಸಿದ್ದರು.
ಸರ್ಕಾರಿ ಗೌರವವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಸಚಿವ ಡಿಕೆ ಶಿವಕುಮಾರ್ ಅವರು ಮನವಿ ಮಾಡಿಕೊಂಡರೂ ಕೂಡಾ ಕುಟುಂಬ ವರ್ಗ ಅದಕ್ಕೆ ಒಪ್ಪದೆ, ಕಾರ್ನಾಡ್ ಅವರ ಅಂತಿಮ ಆಸೆಯಂತೆ ಸರಳವಾಗಿ ಅಂತ್ಯಸಂಸ್ಕಾರ ನೆರವೇರಿಸುವುದಾಗಿ ಹೇಳಿದ್ದರು.
ಇದನ್ನೂ ಓದಿ:ಕಾರ್ನಾಡ್ ಇನ್ನಿಲ್ಲ; ಸಾರ್ವಜನಿಕರಿಗೆ ಚಿತಾಗಾರದಲ್ಲೇ ಅಂತಿಮ ದರ್ಶನ, 3 ದಿನ ಶೋಕಾಚರಣೆ
ಇದನ್ನೂ ಓದಿ:ಖ್ಯಾತ ನಾಟಕಕಾರ, ನಿರ್ದೇಶಕ, ನಟ..ಬಹುಮುಖ ಪ್ರತಿಭೆಯ “ಕಾರ್ನಾಡ್”
ಇದನ್ನೂ ಓದಿ:ಕಾರ್ನಾಡ್ ವಸ್ತುಸ್ಥಿತಿ ವಿಶ್ಲೇಷಿಸುವ ರೀತಿ ಅಪೂರ್ವವಾದುದು: ಸಿಎಂ ಕುಮಾರಸ್ವಾಮಿ