Advertisement

ಹಿರಿಯ ನಟಿ ತಾರಾ ಅವರ ತಾಯಿ ಟಿ. ಪುಷ್ಪಾ ನಿಧನ

09:14 PM Apr 27, 2022 | Team Udayavani |

ಮೈಸೂರು:ಚಲನಚಿತ್ರ ನಟಿ ತಾರಾ ಅವರ ಜತೆ ಮೈಸೂರಿನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ತಾರಾ ಅವರ ತಾಯಿ ಟಿ. ಪುಷ್ಪಾ (76) ಶೂಟಿಂಗ್ ವೇಳೆ ನಿಧನ ಹೊಂದಿದ್ದಾರೆ.

Advertisement

ತೀವ್ರವಾಗಿ ವಾಂತಿಯಾದ ಹಿನ್ನೆಲೆ ತಕ್ಷಣ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ತಾರಾ ಅನುರಾಧಾ ಅವರ ತಾಯಿ ಪುಷ್ಪಾ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೇರಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next