ಪುಣೆ :ಹಿರಿಯ ಚಲನಚಿತ್ರ, ಕಿರುತೆರೆ ಮತ್ತು ರಂಗ ನಟ ವಿಕ್ರಮ್ ಗೋಖಲೆ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
82 ವರ್ಷದ ನಟನನ್ನು ಕೆಲವು ದಿನಗಳ ಹಿಂದೆ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಆದರೆ, ವೈದ್ಯರು ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದರು.
1990ರಲ್ಲಿ ಅಮಿತಾಭ್ ಬಚ್ಚನ್ ಅಭಿನಯದ ‘ಅಗ್ನಿಪಥ್’ ಮತ್ತು 1999ರಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಬಚ್ಚನ್ ನಟಿಸಿದ ‘ಹಮ್ ದಿಲ್ ದೇ ಚುಕೆ ಸನಮ್ ‘ ಸೇರಿದಂತೆ ಹಲವಾರು ಮರಾಠಿ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಗೋಖಲೆ ನಟಿಸಿದ್ದಾರೆ.