ಮುಂಬಯಿ: ಬಾಲಿವುಡ್ ಚಿತ್ರರಂಗದ ಹಿರಿಯ ನಟಿ ಹಾಗೂ ಕಾಜೋಲ್ ಅವರ ತಾಯಿ ತನುಜಾ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತನುಜಾ ಅವರು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದು ಭಾನುವಾರ ರಾತ್ರಿ ತೀವ್ರವಾಗಿ ಅಸ್ವಸ್ಥಗೊಂಡ ತನುಜಾ ಅವರನ್ನು ಕೂಡಲೇ ಜುಹುವಿನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಐಸಿಯು ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ಆಸ್ಪತ್ರೆಯ ಮೂಲಗಳ ಪ್ರಕಾರ ತನುಜಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ವೈದ್ಯರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಚಿತ್ರ ನಿರ್ಮಾಪಕ ಕುಮಾರಸೇನ್ ಸಮರ್ಥ್ ಹಾಗೂ ನಟಿ ಶೋಭನಾ ಸಮರ್ಥ್ ಪುತ್ರಿಯಾಗಿರುವ ತನುಜಾ ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು.1950ರಲ್ಲಿ ‘ಹಮಾರಿ ಭೇಟಿ’ ಚಿತ್ರಕ್ಕೆ ಬಣ್ಣ ಹಚ್ಚಿದ್ದ ತನುಜಾ 1961ರಲ್ಲಿ ‘ಹಮಾರಿ ಯಾದ್ ಆಯೆಗಿ’ ಚಿತ್ರದಲ್ಲಿ ನಾಯಕ ನಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ತನುಜಾ ಅವರ ಪತಿ ಶೋಮು ಮುಖರ್ಜಿ ಕೂಡ ಚಿತ್ರ ನಿರ್ಮಾಪಕರಾಗಿದ್ದು, ಹಲವು ಚಿತ್ರಗಳನ್ನು ನಿರ್ಮಿಸಿದ್ದರು.
ತನುಜಾ ಅವರು ‘ಬಹರೇನ್ ಫಿರ್ ಭಿ ಆಯೆಂಗಿ’, ‘ಜ್ಯುವೆಲ್ ಥೀಫ್’, ‘ಹಾಥಿ ಮೇರೆ ಸಾಥಿ’ ಮತ್ತು ‘ಮೇರೆ ಜೀವನ ಸಾಥಿ’ ಮುಂತಾದ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
ಇದನ್ನೂ ಓದಿ: Gaza ಪಟ್ಟಿಯಲ್ಲಿ ಹಮಾಸ್ ನ 4 ಕಿಲೋ ಮೀಟರ್ ಉದ್ದದ ಸುರಂಗ ಪತ್ತೆ: ಇಸ್ರೇಲ್ ಸೇನೆ