Advertisement

ಬಾಲಿವುಡ್ ಖ್ಯಾತ ನಟ ಶಶಿಕಪೂರ್ ವಿಧಿವಶ

06:07 PM Dec 04, 2017 | Team Udayavani |

ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಖ್ಯಾತ ನಟ ಶಶಿಕಪೂರ್(79ವರ್ಷ) ಸೋಮವಾರ ವಿಧಿವಶರಾಗಿದ್ದಾರೆ.  ಹಿರಿಯ ನಟ ಶಶಿ ಕಪೂರ್ ನಿಧನಕ್ಕೆ ಬಾಲಿವುಡ್ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. 1970ರಲ್ಲಿ ಚಿತ್ರರಸಿಕರ ಮನಗೆದ್ದಿದ್ದ ಶಶಿ ಕಪೂರ್ ಅವರು, 2011ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. 2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದರು.  

1938 ಮಾರ್ಚ್ 18ರಂದು ಶಶಿ ಕಪೂರ್ ಜನಿಸಿದ್ದರು. ಸುಮಾರು 175 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.ಶಶಿಕಪೂರ್ ಅವರು ಸುಹಾಗ್,  ಜೂನೂನ್, ವಿಜೇತ, ಉತ್ಸವ್ ಸೇರಿದಂತೆ ಹಲವು ಸಿನಿಮಾ ಹೆಸರು ತಂದುಕೊಟ್ಟಿತ್ತು. 1991ರಲ್ಲಿ ಅಮಿತಾಬ್ ಬಚ್ಚನ್ ನಟನೆಯ ಅಜೂಬಾ ಸಿನಿಮಾವನ್ನು ಶಶಿಕಪೂರ್ ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿದ್ದರು. ಅಲ್ಲದೇ ಶಶಿಕಪೂರ್ ಅವರು ದ ರಿಟರ್ನ್ ಆಫ್ ದ ಥೀಫ್ ಆಫ್ ಬಗ್ದಾದ್ ಎಂಬ ಸಿನಿಮಾವನ್ನು  ರಷ್ಯನ್ ಭಾಷೆಯಲ್ಲಿ 1988ರಲ್ಲಿ ನಿರ್ದೇಶಿಸಿದ್ದರು.

ಬಾಲನಟನಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದ ಶಶಿ ಕಪೂರ್ ಅವರು ತನ್ನ ಸಹೋದರ ರಾಜ್ ಕಪೂರ್ ಜತೆಯಲ್ಲಿ 1948ರಲ್ಲಿ ಆಗ್ ಸಿನಿಮಾದಲ್ಲಿ ಕಾರ್ಯನಿರ್ವಹಿಸಿದ್ದರು. 1951ರಲ್ಲಿ ಸೂಪರ್ ಹಿಟ್ ಆದ ಆವಾರ್ ದಲ್ಲಿಯೂ ಇಬ್ಬರೂ ಜತೆಯಾಗಿಯೇ ಚಿತ್ರಕ್ಕಾಗಿ ದುಡಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next