ಮೈಸೂರು: ರಂಗಕರ್ಮಿ,ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ಮೊದಲ ನಿರ್ದೇಶಕ ನ.ರತ್ನ (89) ಹೃದಯಾಘಾತದಿಂದ ಬೆಂಗಳೂರಿನಲ್ಲಿ ಬುಧವಾರ ನಿಧನರಾದರು.
ಕಲಾಮಂದಿರದ ಕಿಂದರಜೋಗಿ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನದ ಬಳಿಕ ಜೆಎಸ್‌ಎಸ್ ಆಸ್ಪತ್ರೆಗೆ ದೇಹದಾನ ಮಾಡಲಾಯಿತು.
ತಮಿಳುನಾಡಿನ ಚಿದಂಬರಂನಲ್ಲಿ 1934ರ ಡಿ.12ರಂದು ಜನಿಸಿದ ಅವರು, ಮೈಸೂರು, ಅಮೆರಿಕದಲ್ಲಿ ಶಿಕ್ಷಣ ಪಡೆದರು. ನ್ಯೂಯಾರ್ಕ್‌ನ ಹಂಟರ್ ವಿವಿ, ಇಂಡಿಯಾನಾ ವಿವಿಯಲ್ಲಿ ವಾಕ್ ಮತ್ತು ಶ್ರವಣದಲ್ಲಿ ಎಂ.ಎಸ್ ಹಾಗೂ ಡಾಕ್ಟರೇಟ್ ಪದವಿ ಪಡೆದು, ಅಲ್ಲಿಯೇ ಅಧ್ಯಾಪಕರಾಗಿದ್ದರು.
1966ರಲ್ಲಿ ಆಯುಷ್ ಸ್ಥಾಪನೆಯಾದಾಗ ಮೊದಲ ನಿರ್ದೇಶಕರಾಗಿ ನೇಮಕಗೊಂಡರು.
ರಂಗಕರ್ಮಿಯೂ ಆಗಿದ್ದ ಅವರಿಗೆ 2005ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 2013ರಲ್ಲಿ ರಾಜ್ಯೋತ್ಸವ, ಎಂ.ಎನ್.ರಾಯ್ ಪ್ರಶಸ್ತಿ, ಬಿ.ವಿ. ಕಾರಂತ ಪ್ರಶಸ್ತಿ, ಹೆಲನ್ ಕೆಲರ್ ಪ್ರಶಸ್ತಿ ದೊರೆತಿವೆ.