Advertisement

ಹಿರಿಯ ಒಡಿಯಾ ಚಿತ್ರ ನಟಿ ಅಪರಾಜಿತಾ ಮೊಹಂತಿ ಬಿಜೆಪಿಗೆ

03:57 PM Feb 19, 2018 | Team Udayavani |

ಭುವನೇಶ್ವರ : ಹಿರಿಯ ಒಡಿಯಾ ಚಿತ್ರ ನಟಿ ಅಪರಾಜಿತಾ ಮೊಹಂತಿ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಸಹಿತ ಹಲವು ಹಿರಿಯ ನಾಯಕರ ಸಮ್ಮುಖದಲ್ಲಿ ಇಂದು ಸೋಮವಾರ ಬಿಜೆಪಿ ಸೇರಿದರು. ಈ ತಿಂಗಳ ಆದಿಯಲ್ಲಿ ಆಕೆ ಕಾಂಗ್ರೆಸ್‌ ಪಕ್ಷ ತೊರೆದಿದ್ದರು. 

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಸಿದ್ಧಾಂತಗಳಿಂದ ಪ್ರಭಾವಿತಳಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದು ಅಪರಾಜಿತಾ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು. 

ಅಪರಾಜಿತಾ ಅವರು 2014ರ ಮಹಾ ಚುನಾವಣೆಯಲ್ಲಿ ಕಟಕ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರು. 

ವಾರದ ಹಿಂದಷ್ಟೇ ಇನ್ನೋರ್ವ ಒಡಿಯಾ ನಟಿ ಮಹಾಶ್ವೇತಾ ರಯ್‌ ಅವರು ಬಿಜೆಪಿ ಸೇರಿದ್ದರು. ಈ ವರ್ಷ ಜನವರಿಯಲ್ಲಿ ಇನ್ನಿಬ್ಬರು ಚಿತ್ರ ನಟರಾದ ಅನು ಚೌಧರಿ ಮತ್ತು ಮಿಹಿರ್‌ ದಾಸ್‌ ಬಿಜೆಪಿ ಸೇರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next