ಬೀಜಿಂಗ್: ಡೊನಾಲ್ಡ್ ಟ್ರಂಪ್ ವಿರುದ್ಧ ಕೊನೆ ಕ್ಷಣದವರೆಗೂ ಗುಟುರು ಹಾಕಿದ್ದ ಚೀನಾ ಈಗ ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ರನ್ನೂ ನಿಧಾನಕ್ಕೆ ಎದುರು ಹಾಕಿಕೊಳ್ಳಲು ಸಜ್ಜಾಗಿದೆ.
“ಬೈಡೆನ್ ಒಬ್ಬ ದುರ್ಬಲ ಅಧ್ಯಕ್ಷರಾಗುವ ಸಾಧ್ಯತೆ ಇದೆ’ ಎಂದು ಝೆಂಗ್ ಯಾಂಗ್ನಿಯಾನ್ ವಿಶ್ಲೇಷಿಸಿದ್ದಾರೆ. “ದೇಶೀಯ ಸಮಸ್ಯೆಗಳನ್ನು ಪರಿಹರಿಸಲು ಬೈಡೆನ್ ಆಡಳಿತ ವಿಫಲವಾದರೆ, ರಾಜತಾಂತ್ರಿಕ ಹಾದಿಯಲ್ಲಿ ಚೀನಾ ವಿರುದ್ಧ ಏನನ್ನಾದರೂ ಅವರು ಮಾಡುವ ಅಪಾಯವಿದೆ.
ಟ್ರಂಪ್ ಯಾವತ್ತೂ ಯುದ್ಧದ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಆದರೆ, ಡೆಮಾಕ್ರಾಟ್ ಅಧ್ಯಕ್ಷ ಚೀನಾ ವಿರುದ್ಧ ಯುದ್ಧ ಆರಂಭಿಸಲೂಬಹುದು’ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಯುಎಇ: ಉದ್ಯಮ ಸ್ಥಾಪನೆ, ಹೂಡಿಕೆ ನಿಯಮದಲ್ಲಿ ಸಡಿಲಿಕೆ
“ಟ್ರಂಪ್ ಆಡಳಿತದಲ್ಲಿ ಅಮೆರಿಕ ಸಮಾಜ ಹರಿದುಹಂಚಿ ಹೋಗಿದೆ. ಅದನ್ನು ಒಗ್ಗೂಡಿಸಲು ಬೈಡೆನ್ ಶ್ರಮಿಸಬಹುದು. ಪ್ರಜಾಪ್ರಭುತ್ವ, ಸ್ವಾತಂತ್ರ್ಯವನ್ನು ಉತ್ತೇಜಿಸಲು ಟ್ರಂಪ್ ಆಸಕ್ತರಾಗಿರಲಿಲ್ಲ. ಆದರೆ, ಬೈಡೆನ್ ಅದನ್ನು ಸಾಧಿಸಬಹುದು’ ಎಂದು ಅಂದಾಜಿಸಿದ್ದಾರೆ.