Advertisement

ನಮ್‌ ಮಿಸ್ಸು ತುಂಬಾ ಒಳ್ಳೆಯವರು ಗೊತ್ತಾ…!

11:17 AM Jun 27, 2020 | mahesh |

ಬಹಳ ಒಳ್ಳೆರ್‌ ನಮ್‌ ಮಿಸ್ಸು ಏನ್‌ ಹೇಳಿದ್ರು ಎಸ್‌ಎಸ್‌ ಎಸ್ಸು. ನಗ್ತಾ ನಗ್ತಾ ಮಾತಾಡಿಸ್ತಾರೆ ಕಾಲೇಜಿಗೆಲ್ಲ ಫೇಮಸ್ಸು…’ ನಮ್ಮ ಪತ್ರಿಕೋದ್ಯಮ ವಿಭಾಗದಲ್ಲಿ ನಮ್ಮ ಎಲ್ಲ ಶಿಕ್ಷಕರು ತುಂಬಾ ಆತ್ಮೀಯರು. ಅದರಲ್ಲೂ ನಮ್ಮ ಸುಶ್ಮಿತಾ ಮೇಡಂ ಅಂದ್ರೆ ತುಂಬಾ ಆದರ್ಶ ವ್ಯಕ್ತಿ ಮತ್ತು ವ್ಯಕ್ತಿತ್ವ.

Advertisement

ಯಾವುದೇ ಕ್ಷಣದಲ್ಲಿ ಆಗಲೀ, ಎಷ್ಟೇ ಹೊತ್ತಿಗಾಗಲಿ ಮ್ಯಾಮ್‌ ಅಂತ ಒಂದು ರಾಗ ಎಳೆದರೆ ಸಾಕು, ಏನಾಯ್ತು? ಎಲ್ಲಿದ್ದಿ? ಅಂತ ನೂರು ಪ್ರಶ್ನೆ ಕೇಳ್ತಾರೆ. ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದರೂ ಎಲ್ಲರೊಂದಿಗೆ ಬೆರೆತು ತನಗೆ ಕೊಟ್ಟ ಕಾರ್ಯವನ್ನು ಚಾಚು ತಪ್ಪದೇ ಸಮಯಕ್ಕೆ ಮುಂಚಿತವಾಗಿ ಮುಗಿಸುವ ಚತುರೆ. ಅದೆಷ್ಟೋ ಬಾರಿ ಮನಸ್ಸಿನ ಮಾತುಗಳನ್ನು ಅವರೊಂದಿಗೆ ಹಂಚಿಕೊಂಡು ಕಣ್ಣ ಹನಿಗಳು ಉರಳಿದ್ದು ಇದೆ. ಆವಾಗೆಲ್ಲ ತನ್ನ ಒಡಹುಟ್ಟಿದವಳಂತೆ ಸಾಂತ್ವನದ ಮಾತನ್ನು ಹೇಳಿದ ನನ್ನಕ್ಕ ಮೇಡಂ.

ಉಪನ್ಯಾಸಕಿಯರು ವಿದ್ಯಾರ್ಥಿಗಳ ಜತೆಗೆ ಇಷ್ಟೊಂದು ಆತ್ಮೀಯರಾಗಿ ಇರುತ್ತಾರಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದ್ದು ಇದೆ. ಅದಕ್ಕೆಲ್ಲ ಕಾರಣ ಉಪನ್ಯಾಸಕ ಮತ್ತು ವಿದ್ಯಾರ್ಥಿಗಳ ನಡುವಿರುವ ನಂಬಿಕೆ.

“ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಅಂತಾರಲ್ಲ ಹಾಗೆ ಇವರು. ಪ್ರತಿಯೊಂದು ಹೆಜ್ಜೆಯಲ್ಲೂ ನಾ ಸಾಕಷ್ಟು ಕಲಿತಿದ್ದೇನೆ. ನಾ ಅತ್ತಾಗ ಕಣ್ಣೀರು ಒರೆಸಿ, ನಕ್ಕಾಗ ಅವರು ನಕ್ಕು, ಕೆಲವೊಮ್ಮೆ ಜೀವನವೆಂಬ ಗಾಳಿಪಟ ಎಡವಿ ಬಿ¨ªಾಗ ತನ್ನ ಕಿರುಬೆರಳನ್ನಾದರೂ ನೀಡಿ ಮೇಲೆತ್ತಿ¨ªಾರೆ. ಅದೆಷ್ಟೋ ಬಾರಿ ನನ್ನ ಅಧಿಕಪ್ರಸಂಗ, ತರಲೆಗಳಿಗೆ ಕಡಿವಾಣ ಹಾಕಿದ್ದಾರೆ. ಎಲ್ಲ ಉಪನ್ಯಾಸಕರಂತಲ್ಲ ನನ್ನ ಮೇಡಂ ತುಂಬಾ ಸ್ಟ್ರಾಂಗ್‌, ಕ್ಲಾಸ್‌ ಒಳಗಡೆ ಗಾಂಭೀರ್ಯ ಮಿಸ್ಸು, ಹೊರಗಡೆ ಸ್ವೀಟ್‌ ಸಿಸ್ಸು. ಒಬ್ಬ ಉಪನ್ಯಾಸಕಿ ಕೇವಲ ಮೇಡಂ ಆಗಿದ್ದರೆ ಸಾಲದು, ವಿದ್ಯಾರ್ಥಿಗಳ ಭಾವನೆಗಳಿಗೆ ಸ್ಪಂದಿಸುವ, ಮಿಡಿಯುವ ಮನೋಭಾವ ಅವರಲ್ಲಿ ಇರಬೇಕು. ಆಗ ಮಾತ್ರ ಆ ಹುದ್ದೆಗೆ, ಆ ವ್ಯಕ್ತಿತ್ವಕ್ಕೆ ನಿಜವಾದ ಗೌರವ, ಬೆಲೆ ದೊರೆತಂತೆ. ಅದಕ್ಕೆ ಈ ಎಲ್ಲ ಗುಣವನ್ನು ಹೊಂದಿರುವ ನಮ್ಮ ಮೇಡಂ ನಂಗೆ ಅಷ್ಟು ಅಚ್ಚುಮೆಚ್ಚು.

Advertisement

ಸುಷ್ಮಾ ಸದಾಶಿವ್‌ ವಿವೇಕಾನಂದ ಕಾಲೇಜು, ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next