Advertisement
ಸಂಸ್ಥೆಯ ಪಾಲುದಾರರಾದ ಗುರುದತ್ತ ಶೆಣೈ, ಮಹೇಶ್ ಶೆಟ್ಟಿ ಹಾಗೂ ಮಂಗಳದೀಪ್ ಅವರು ಇರೆಟೆಕ್ಸ್ ಪ್ರೀಮಿಯರ್ ಇಂಡಿಯಾ ಪ್ರೈ.ಲಿ.ನ ಆಡಳಿತ ನಿರ್ದೇಶಕರಾದ ಜಿ.ಜಿ ಶೆಣೈ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ನಾವೀನ್ಯತೆ, ನಾಯಕತ್ವ ಸಮರ್ಪಣೆ ಮತ್ತು ಬದ್ಧತೆಯನ್ನು ಗುರುತಿಸಿ ವರ್ಟೆಕ್ಸ್ ವರ್ಕ್ಸ್ಪೇಸ್’ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳು ಹೊಂದಿರುವಂತಹ ಸ್ಥಳ ಹುಡುಕಾಟ ಮಾಡುವಂತ ಸಾಧ್ಯತೆ ಹೆಚ್ಚುಕ್ತಿರುವುದರಿಂದ ಆಗತ್ಯ ಸೌಲಭ್ಯಗಳನ್ನು ಕೊಡುವ ಕೆಲಸ “ವರ್ಟೆಕ್ಸ್ ವರ್ಕ್ಸ್ ಸ್ಪೇಸ್’ ‘ ಪೂರೈಸಲಿದೆ. ಇಲ್ಲಿ ಕಾರ್ಯಾಚರಣೆಗೆ ಬೇಕಾದಂತಹ ಕಾಮನ್ ರಿಸೆಪ್ಟನ್ ಡೆಸ್ಕ್, ಕಾನ್ಫರೆನ್ಸ್ ರೂಮ್ಸ್, ಮೀಟಿಂಗ್ ರೂಮ್, ವೈ-ಫೈ ಇಂಟರ್‌ನೆಟ್, ವಿಶಾಲವಾದ ಕಾರ್ ಪಾರ್ಕಿಂಗ್, ಪಾಂಟ್ರಿ, ಕೆಫೆ ಮುಂತಾದ ಸೌಲಭ್ಯಗಳು ಲಭ್ಯವಿವೆ. ಕಳೆದ 3 ವರ್ಷಗಳಲ್ಲಿ 27 ಕಾರ್ಪೋರೇಟ್ ಸಂಸ್ಥೆಗಳು ವರ್ಟೆಕ್ಸ್ನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದು 1800 ಕ್ಕೂ ಹಚ್ಚುವರಿ ಉದ್ಯೋಗವಕಾಶಗಳನ್ನು ಮಂಗಳೂರಿನಲ್ಲಿ ಸೃಷ್ಟಿಸಿವೆ. ಇದೀಗ ಅನೇಕ ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳಿಂದ ಬೇಡಿಕೆ ಹೆಚ್ಚಾಗುತ್ತಿದ್ದು ಹಾಗೂ ಮಂಗಳೂರಿನ ಯುವ ಜನತೆಗೆ ಮತ್ತಷ್ಟು ಉದ್ಯೋಗವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯು ನಗರದ ಬಿಜೈ – ಕಾಪಿಕಾಡ್‌ನಲ್ಲಿ ತಮ್ಮ 3ನೇ ಯೋಜನೆಯಾದ ಅಶೋಕಾ ಬುಸಿನೆಸ್ ಸೆಂಟರ್‌ನ್ನು ನಿರ್ಮಿಸುತ್ತಿದೆ. ಇಲ್ಲಿ ಸಂಸ್ಥೆಗಳ ಕಾರ್ಯಾಚರಣೆಗೆ ಬೇಕಾದಂತಹ ಕಾನ್ಫರೆನ್ಸ್ ರೂಮ್ಸ್, ಮೀಟಿಂಗ್ ರೂಮ್ಸ್, ಬ್ಯಾಕ್ವೆಟ್ ಹಾಲ್, ಆಡಿಟೋರಿಯಮ್, ಮನೋರಂಜನಾವಲಯ, ಗೇಮಿಂಗ್ ಝೋನ್, ಸೆಕ್ಯರ‍್ಡ್ ಆಕ್ಸೆಸ್ ಕಂಟ್ರೋಲ್, ಹೆಲ್ಪ ಡೆಸ್ಕ್ ವಿದ್ ವಿಸಿಟರ್ ಲಾಬಿ, ವಿಶಾಲವಾದ 3 ಲೆವೆಲ್‌ನ ಕಾರ್ ಪಾರ್ಕಿಂಗ್, ವೈ-ಫೈ ಇಂಟರ್‌ನೆಟ್, ಕೆಫೆ ಮುಂತಾದ ಸೌಲಭ್ಯಗಳನ್ನೊಳಗೊಳ್ಳಲಿದೆ.
Related Articles
Advertisement