Advertisement

ಏಪ್ರಿಲ್ 27 ರಂದು ಪತ್ರಕರ್ತ ತರುಣ್ ತೇಜ್‌ ಪಾಲ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು

01:11 PM Mar 24, 2021 | Team Udayavani |

ಪಣಜಿ : ಗೋವಾದ ಸೆಷನ್ ನ್ಯಾಯಾಲಯ ಏಪ್ರಿಲ್ 27 ರಂದು, ತೆಹಲ್ಕಾ ನಿಯತಕಾಲಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ ಪಾಲ್ ಅವರ ವಿರುದ್ಧ ದಾಖಲಾದ 2013 ರ ಅತ್ಯಾಚಾರ ಪ್ರಕರಣಕ್ಕೆ ತಿರ್ಪು ಪ್ರಕಟಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

2013 ರಲ್ಲಿ ನಿಯತಕಾಲಿಕೆ ಗೋವಾದ ಪಂಚತಾರಾ ಹೋಟೇಲ್ ನಲ್ಲಿ ಆಯೋಜಿಸಿದ್ದ ಸಂದರ್ಭ, ಲಿಪ್ಟ್ ನೊಳಗೆ ತನ್ನ ಸಹದ್ಯೋಗಿಯೊಬ್ಬರಿಗೆ ತರುಣ್ ತೇಜ್ ಪಾಲ್ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪಿಸಲಾಗಿದೆ.

ಓದಿ :  ದೇಶ್ ಮುಖ್ ವಸೂಲಿ ಪ್ರಕರಣ : ರಾಜ್ಯಪಾಲರನ್ನು ಭೇಟಿ ಮಾಡಿದ ಫಡ್ನವಿಸ್

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕ್ಷಮಾ ಜೋಶಿ ಮಾರ್ಚ್ 8 ರಂದು ತರುಣ್ ತೇಜ್‌ಪಾಲ್ ಪ್ರಕರಣದಲ್ಲಿ ಅಂತಿಮ ವಾದಗಳನ್ನು ಆಲಿಸಿ ತೀರ್ಪಿನ  ಮುಂದಕ್ಕೆ ದೂಡಿದ್ದರು.

ತನಿಖಾ ಅಧಿಕಾರಿ ಸುನಿತಾ ಸಾವಂತ್, ಈ ಪ್ರಕರಣದ ತೀರ್ಪನ್ನು ಗೋವಾ ಸೆಷನ್ ನ್ಯಾಯಾಲಯ ಏಪ್ರಿಲ್ 27ರಂದು ಪ್ರಕಟಿಸಲಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

Advertisement

ತರುಣ್ ತೇಜ್‌ಪಾಲ್, ಸೆಕ್ಷನ್ 341 , 342 , 354 ,  354 A (sexual harassment / ಲೈಂಗಿಕ ಕಿರುಕುಳ), 354 B, 376 (2)(f)  and 376(2)(k) (IPC) ಅಡಿಯಲ್ಲಿ ಆರೋಪವನ್ನು ಎದುರಿಸುತ್ತಿದ್ದಾರೆ.

ಓದಿ :  ಏಪ್ರಿಲ್ 1 ರಿಂದ ಬದಲಾಗಲಿದೆ ಇನ್ ಕಮ್ ಟ್ಯಾಕ್ಸ್ ನ ಹಲವು ನಿಯಮಗಳು.! ಇಲ್ಲಿದೆ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next