ವೇಣೂರು: ಇಂದು ಅಂತರ್ಜ ಲದ ಮಟ್ಟ ಕುಸಿದಿದೆ. ಜಿಲ್ಲೆಯಲ್ಲಿನ ನದಿಗಳೂ ಬಹುಬೇಗನೇ ಬತ್ತುತ್ತಿವೆ. ಜಲ ಸಾಕ್ಷರತೆ ಪುಣ್ಯದ ಕೆಲಸ. ಮಾನವ ಸಂಪ ನ್ಮೂಲ ನಿಜವಾದ ಸಂಪತ್ತು ಎಂಬುವುದನ್ನ್ನು ಎನ್ನೆನ್ಸೆಸ್ ವಿದ್ಯಾರ್ಥಿಗಳು ತೋರಿಸಿ ಕೊಟ್ಟಿ ದ್ದಾರೆ ಎಂದು ಪುತ್ತೂರು ಸಹಾಯಕ ಆಯುಕ್ತ ಡಾ| ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.
ಗ್ರಾ.ಪಂ. ವೇಣೂರು, ಸ.ಪ್ರ.ದ. ಕಾಲೇಜು ಪುಂಜಾಲಕಟ್ಟೆ ಇದರ ಎನ್ನೆಸ್ಸೆಸ್ ಘಟಕ, ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನ, ಲಯನ್ಸ್ ಕ್ಲಬ್, ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆ ಹಾಗೂ ವೇಣೂರು ಐಸಿವೈಎಂ ಸಹಯೋಗದಲ್ಲಿ ವೇಣೂರಿನ ಮುಖ್ಯಪೇಟೆಯಲ್ಲಿ ಹಾದು ಹೋಗಿರುವ ಫಲ್ಗುಣಿ ನದಿಗೆ ಪಾರಂಪರಿಕ ಕಟ್ಟ ಮತ್ತು ಜಲ ಸಾಕ್ಷರತೆ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ ಶಿವಪ್ರಸಾದ್ ಅಜಿಲ, ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನ ಪ್ರಾಚಾರ್ಯ ಪ್ರೊ| ಗಣಪತಿ ಭಟ್ ಕುಳಮರ್ವ, ಉಪನ್ಯಾಸಕಿ ದೀಕ್ಷಿತಾ ವರ್ಕಾಡಿ, ವೇಣೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ಕುಂಭಶ್ರೀ ವಿದ್ಯಾಸಂಸ್ಥೆಯ ಸಂಚಾಲಕ ಗಿರೀಶ್ ಕೆ.ಎಚ್., ಪ್ರಾಚಾರ್ಯ ರಕ್ಷಿತ್ ಕುಲಾಲ್, ಮುಖ್ಯ ಶಿಕ್ಷಕಿ ಉಷಾ ಜಿ., ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಅಶ್ವಿತ್ ಕುಲಾಲ್, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ಉಪಾಧ್ಯಕ್ಷ ಅರುಣ್ ಕ್ರಾಸ್ತ, ವೇಣೂರು ವರ್ತಕರ ಸಂಘದ ಅಧ್ಯಕ್ಷ ಭಾಸ್ಕರ ಪೈ, ವೇಣೂರು ಯುವವಾಹಿನಿ ಘಟಕ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ನಿತೀಶ್ ಎಚ್., ವೇಣೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ವೇಣೂರು ಯುವವಾಹಿನಿ ಘಟಕದ ನಿಯೋಜಿತ ಅಧ್ಯಕ್ಷ ನವೀನ್ ಪಚ್ಚೇರಿ, ಐಸಿವೈಎಂ ಸಚೇತಕ ಅರುಣ್ ಡಿ’ಸೋಜಾ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಗ್ರಾ.ಪಂ. ಸದಸ್ಯರು, ಪೊಲೀಸ್ ಸಿಬಂದಿ, ಪಂ. ಸಿಬಂದಿ ಹಾಗೂ ಗ್ರಾಮಸ್ಥರು ಶ್ರಮದಾನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಪ್ರಮುಖ ಆಯೋಜಕ ಪಿ. ಧರಣೇಂದ್ರ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಈ ವೇಳೆ ಮಗಳು ಕನ್ನಡ ಚಲನಚಿತ್ರದ ಚಿತ್ರೀಕರಣವೂ ನಡೆಯಿತು. ನಿರ್ದೇಶಕ ತೋಮಸ್ , ಕಲಾವಿದರು ಉಪಸ್ಥಿತರಿದ್ದರು.