Advertisement
28ನೇ ವರ್ಷದ ವೇಣೂರು ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಕಂಬಳದಲ್ಲಿ ಒಟ್ಟು 200 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ ನಾಲ್ಕು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಆರು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 16 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 26 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 24 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 124 ಜೊತೆ ಭಾಗವಹಿಸಿದ್ದವು. ಮೂಡುಬಿದಿರೆ ಮತ್ತು ಮಿಯ್ಯಾರು ಹೊರತುಪಡಿಸಿದರೆ ಅತೀ ಹೆಚ್ಚು ಕೋಣಗಳು ಭಾಗವಹಿಸಿದ ಕೂಟ ಇದಾಗಿತ್ತು.
Related Articles
Advertisement
ವೇಣೂರು ಕಂಬಳ 2021 ಫಲಿತಾಂಶ
ಕನೆಹಲಗೆ
ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ. ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್
ದ್ವಿತೀಯ: ಬಾರ್ಕೂರು ಶಾಂತಾರಾಮ ಶೆಟ್ಟಿ. ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್
ಅಡ್ಡ ಹಲಗೆ
ಪ್ರಥಮ: ಕೋಟ ಗಿಳಿಯಾರು ಹಂಡಿಕೆರೆ ವಸಂತ ಕುಮಾರ್ ಶೆಟ್ಟಿ “ಎ”. ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಬಿ”.ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
ಹಗ್ಗ ಹಿರಿಯ
ಪ್ರಥಮ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ “ಬಿ” :ಓಡಿಸಿದವರು. ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಹೊಸಬೆಟ್ಟು ಏರಿಮಾರು ಗೋಪಾಲಕೃಷ್ಣ ಭಟ್ “ಬಿ”. ಓಡಿಸಿದವರು: ಬೈಂದೂರು ವಿಶ್ವನಾಥ್ ದೇವಾಡಿಗ
ಹಗ್ಗ ಕಿರಿಯ
ಪ್ರಥಮ: ಕಾಂತಾವರ ಬಾರಾಡಿ ಬೀಡು ನಿಹಾಲ್ ಜೆ ಬಳ್ಳಾಳ್. ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಹೊಕ್ಕಾಡಿಗೋಳಿ ಹಕ್ಕೇರಿ ಸನತ್ ಕುಮಾರ್ ಶೆಟ್ಟಿ. ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಮ್. ಶೆಟ್ಟಿ
ಇದನ್ನೂ ಓದಿ: ಕಂಬಳ ಕರೆಯಲ್ಲಿ ಹೊಸ ದಾಖಲೆ ಬರೆದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಶ್ರೀನಿವಾಸ ಗೌಡ
ನೇಗಿಲು ಹಿರಿಯ
ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ “ಎ”. ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ವೇಣೂರು ಪೆರ್ಮುಡ ಸನತ್ – ಸಂಪತ್ ಅಂಚನ್. ಓಡಿಸಿದವರು: ಬೈಂದೂರು ವಿವೇಕ್
ನೇಗಿಲು ಕಿರಿಯ
ಪ್ರಥಮ: ಸಿದ್ಧಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ “ಬಿ”. ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಮ್. ಶೆಟ್ಟಿ
ದ್ವಿತೀಯ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಎ”. ಓಡಿಸಿದವರು: ಮರೋಡಿ ಶ್ರೀಧರ್