Advertisement
ಅಜಿಲ ಕೆರೆವೇಣೂರು ಮುಖ್ಯಪೇಟೆ ಯಿಂದ ಅನತಿ ದೂರದಲ್ಲಿ ಐತಿಹಾಸಿಕ ಹಿನ್ನೆಲೆಯಿರುವ ಅಜಿಲ ಕೆರೆ ಇದೆ. ಕ್ರಿ.ಶ. 1604ರ 4ನೇ ವೀರ ತಿಮ್ಮಣ್ಣ ಅಜಿಲರ ಕಾಲದಲ್ಲಿ ವೇಣೂರು ಶ್ರೀ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಸಮಯ ದಲ್ಲಿ ನೀರಿನ ಸೌಕರ್ಯಕ್ಕಾಗಿ ವೇಣೂರಿನ ಕಲ್ಯಾಣಿ ಪ್ರದೇಶದಲ್ಲಿ ಎರಡು ಬೆಟ್ಟಗಳ ಮಧ್ಯೆ ನಿರ್ಮಿಸಲಾಗಿರುವ ಕೆರೆಯೇ ಅಜಿಲ ಕೆರೆ. ಸುಮಾರು 8.53 ಎಕ್ರೆ ವ್ಯಾಪ್ತಿಯನ್ನು ಹೊಂದಿರುವ ಈ ಕೆರೆ ಯಲ್ಲಿ ನೀರು ಬತ್ತುವುದೇ ಇಲ್ಲ. ಅನುದಾನ
ಮೂಡುಕೋಡಿ ಗ್ರಾಮದ ಎರಡಾಲುವಿನಲ್ಲಿ 65 ಸೆಂಟ್ಸ್ ವ್ಯಾಪ್ತಿಯ ಕೆರೆಯೂ ಪಾಳು ಬಿದ್ದಿದ್ದು, ಇದಕ್ಕೂ ಉಪಯೋಗಿಸಲಾದ ಸರಕಾರಿ ಅನುದಾನ ಪೋಲಾಗಿದೆ. 1962 ಇಸವಿಯಲ್ಲಿ ಕರಿಮಣೇಲು, ಮೂಡುಕೋಡಿ ಗ್ರಾಮಸ್ಥರಿಗೆ ನೀರಿನ ಸೌಲಭ್ಯ ಕಲ್ಪಿಸಿದ್ದ ಈ ಕೆರೆಯು ಆ ಬಳಿಕ ಪಾಳುಬಿದ್ದಿದೆ. 2018ರ ಜನವರಿಯಲ್ಲಿ ಜಿ.ಪಂ. ಅನುದಾನದಡಿ 3.30 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಯುವ ಕಾರ್ಯ ಮಾಡಲಾಗಿತ್ತು. ಆದರೆ ಕಾಮಗಾರಿ ಅಸಮರ್ಪಕವಾಗಿ ನಿರ್ವಹಿಸಿದ ಕಾರಣ ಕಳೆದ ಮಳೆಗಾಲದಲ್ಲಿ ಕೆರೆ ಬದಿಯ ಮಣ್ಣು ಜರಿದಿದ್ದು, ಮತ್ತೆ ಹೂಳು ತುಂಬಿಕೊಂಡಿದೆ. ಈಗಾಗಿ ಇದಕ್ಕೆ ಇದಕ್ಕೆ ಖರ್ಚು ಮಾಡಲಾದ ಸರಕಾರಿ ಅನುದಾನ ಪೋಲಾಗಿದೆ.
Related Articles
ಈಗ ಎಲ್ಲೆಡೆ ಕೆರೆ, ಬಾವಿಗಳಲ್ಲಿ ಮಾತ್ರವಲ್ಲದೆ ಕೊಳವೆಬಾವಿಗಳಲ್ಲೂ ನೀರು ಬತ್ತಿಹೋಗಿದೆ. ಕೆಲವು ಕೊಳವೆಬಾವಿಗಳಲ್ಲಿ ಪಂಪನ್ನು ಕೆಳಗಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಇತಿಹಾಸ ಪ್ರಸಿದ್ಧ ವೇಣೂರು ಅಜಿಲ ಕೆರೆ ಹಾಗೂ ಎರಡಾಲು ಕೆರೆಯಲ್ಲಿ ಇನ್ನೂ ನೀರು ಬತ್ತಿಲ್ಲ. ಈಗಾಗಿ ಇವೆರಡರ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ಧಿಗೊಳಿಸಿದರೆ ವೇಣೂರು-ಮೂಡುಕೋಡಿ ಪರಿಸರಕ್ಕೆ ಸಾಕಷ್ಟು ನೀರು ಪೂರೈಕೆ ಸಾಧ್ಯ.
Advertisement
ಕೆರೆಗಳ ಒತ್ತುವರಿ ಆರೋಪಅಜಿಲ ಕೆರೆ ಹಾಗೂ ಎರಡಾಲು ಕೆರೆಗಳನ್ನು ಸ್ಥಳೀಯ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಅಜಿಲ ಕೆರೆಯ ಪ್ರಕರಣ ನ್ಯಾಯಾಲಯ ಹಂತದಲ್ಲಿದೆ. ಎರಡಾಲು ಕೆರೆಗೆ ಬೇಲಿ ಹಾಕಿ ಒತ್ತುವರಿ ಮಾಡಲಾಗಿದೆ. ಗ್ರಾಮಸ್ಥರ ಆಕ್ಷೇಪಣೆ ಮೇರೆಗೆ ಒತ್ತುವರಿ ಮಾಡಿಕೊಂಡವರೇ ಬಿಟ್ಟು ಕೊಡುವುದಾಗಿ ತಿಳಿಸಿದ್ದು, ವಶಕ್ಕೆ ಪಡೆದುಕೊಳ್ಳಲು ವೇಣೂರು ಗ್ರಾ.ಪಂ. ಮೀನಮೇಷ ಎಣಿಸುತ್ತಿದೆ ಎಂಬುದು ಗ್ರಾಮಸ್ಥರ ಆರೋಪ. ಒತ್ತುವರಿ ತೆರವಿಗೆ ಪಂ.ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿ ದ್ದರೂ ಒತ್ತುವರಿ ತೆರವಾಗದ ಬಗ್ಗೆ ನಾಗರಿಕರಲ್ಲಿ ಸಂಶಯ ಮೂಡಿಸಿದೆ. ಒಟ್ಟಿನಲ್ಲಿ ವೇಣೂರು ಗ್ರಾ.ಪಂ. ವ್ಯಾಪ್ತಿಯ ಎರಡು ಪ್ರಮುಖ ಕೆರೆಗಳು ಉಪಯೋಗವಿಲ್ಲದೇ ಪಾಳು ಬಿದ್ದಿರುವುದು ವಿಪರ್ಯಾಸವೇ ಸರಿ.
ಮನವಿ ನೀಡಿದರೆ ಕ್ರಿಯಾಯೋಜನೆ
ಎರಡಾಲು ಕೆರೆಗೆ ಸ್ಥಳೀಯರು ಮನವಿ ನೀಡಿದರೆ ಕ್ರಿಯಾಯೋಜನೆ ತಯಾರಿಸಿ ನವೆಂಬರ್‌ನಲ್ಲಿ ಅಭಿವೃದ್ಧಿಪಡಿಸಲಾಗುವುದು. ಒತ್ತುವರಿ ತೆರವಿಗೆ ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ. 3 ಲಕ್ಷ ರೂ. ವೆಚ್ಚದಲ್ಲಿ ಅಜಿಲ ಕೆರೆಯ ಹೂಳೆತ್ತುವ ಕಾರ್ಯ ಮಾಡಲಾಗಿದೆ.
– ಕೆ. ವೆಂಕಟಕೃಷ್ಣರಾಜ,
ಪಿಡಿಒ, ವೇಣೂರು ಗ್ರಾ.ಪಂ.
ಪಿಡಿಒ, ವೇಣೂರು ಗ್ರಾ.ಪಂ.
ಪದ್ಮನಾಭ ವೇಣೂರು