Advertisement

 ವೇಣೂರು ದೇಗುಲ ಜೀರ್ಣೋದ್ಧಾರ ಸಮಿತಿ ಬರ್ಖಾಸು

02:57 PM Oct 04, 2017 | |

ವೇಣೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಬರ್ಖಾಸ್ತುಗೊಂಡಿದ್ದು, ಅದರ ಪರಿಣಾಮವಾಗಿ ಇದೀಗ ಕೋಟ್ಯಂತರ ರೂ. ಮೌಲ್ಯದ ಮರಳು ಹಾಗೂ ಮರಮಟ್ಟುಗಳು ಹಾಳಾಗುತ್ತಿವೆ.ಎರಡು, ಮೂರು ವರ್ಷಗಳ ಹಿಂದೆ ಶೇಖರಣೆ ಮಾಡಿಡಲಾಗಿರುವ ಮರಳು ರಾಶಿ, ಕೆತ್ತನೆ ಮಾಡಲಾಗಿರುವ ಮರಮಟ್ಟುಗಳು, ಮರದ ದಿಮ್ಮಿಗಳು ಹಾಗೂ ಧ್ವಜಸ್ತಂಭ ಮಳೆ, ಬಿಸಿಲಿಗೆ ಹಾಳಾಗುತ್ತಿವೆ.


12 ಕೋ.ರೂ ವೆಚ್ಚದ ಯೋಜನೆ
2014ರ ಸೆಪ್ಟಂಬರ್‌ ತಿಂಗಳಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ
12 ಕೋ.ರೂ. ವೆಚ್ಚದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಸಮಿತಿಯು ಗರ್ಭಗುಡಿಯ ಮಹಡಿ,
ತೀರ್ಥಮಂಟಪದ ಮಹಡಿ, ಜನಾರ್ದನ ದೇವರ ಗುಡಿಯ ಮಹಡಿ, ಹಲಗೆ, ರೀಪು, ಪಕ್ಕಾಸು ಸೇರಿದಂತೆ ಮರದ ಕೆತ್ತನೆಗಳ ಶೇ. 50ರಷ್ಟು ಕೆಲಸವನ್ನು ಪೂರ್ಣಗೊಳಿಸಿತ್ತು.

Advertisement

ಶೇ.60ರಷ್ಟು ಶಿಲೆಯ ಕೆಲಸವನ್ನೂ ಪೂರ್ಣಗೊಳಿಸಿತ್ತು. 4.50 ಲ.ರೂ.ವೆಚ್ಚದ ಶೌಚಾಲಯದ ಕಾರ್ಯವೂ ಭಾಗಶಃ ಪೂರ್ಣಗೊಂಡಿದೆ. ಅನಂತರದ ಬೆಳವಣಿಗೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರಮುಖ ಪದಾಧಿಕಾರಿಗಳು
ಸಮಿತಿಗೆ ರಾಜೀನಾಮೆ ನೀಡಿದ್ದರಿಂದ ಸಮಿತಿಯನ್ನು ಇಲಾಖೆ ಬರ್ಖಾಸ್ತು ಮಾಡುವಂತೆ ಸೂಚಿಸಿ ಜೀರ್ಣೋದ್ಧಾರ
ಸಮಿತಿಯ ಎಲ್ಲ ಖಾತೆಗಳನ್ನು ದೇವಸ್ಥಾನದ ಆಡಳಿತ ಸಮಿತಿಗೆ ಹಸ್ತಾಂತರಿಸುವಂತೆ ಆದೇಶ ನೀಡಿದ್ದಾರೆ.

ಇದರಂತೆ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಲೆಕ್ಕಪತ್ರವನ್ನು ಆಡಳಿತ ಸಮಿತಿಗೆ ಹಸ್ತಾಂತರಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ನೂತನ ವ್ಯವಸ್ಥಾಪನ ಸಮಿತಿ ರಚನೆಯಾಗಿದ್ದರೂ ಇನ್ನೂ ಜೀರ್ಣೋದ್ಧಾರ ಸಮಿತಿ ಪುನಾರಚನೆಯಾಗಿಲ್ಲ. ಜೀರ್ಣೋದ್ಧಾರ ಸಮಿತಿ ಪುನಾರಚನೆಯಾಗಿ ಜೀರ್ಣೋದ್ಧಾರ ಪೂರ್ಣಗೊಳ್ಳಲಿ ಎಂಬುದು ಭಕ್ತರ ಆಶಯ. 

ರಾಜಕೀಯ ಕುತಂತ್ರ ಐತಿಹಾಸಿಕ ಹಿನ್ನೆಲೆಯ
ಅಜಿಲ ಸೀಮೆಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಜನತೆ ಪ್ರಾಮಾಣಿಕ ಸಹಕಾರ ನೀಡಿದ್ದಾರೆ. ಆದರೆ ಕೆಲವು ರಾಜಕೀಯ ಕುತಂತ್ರದಿಂದ ಪುಣ್ಯದ ಕಾರ್ಯವೊಂದು ನಿಲ್ಲುವ ಜತೆಗೆ ಕೋಟ್ಯಂತರ ರೂ. ಮೌಲ್ಯದ ಮರಮಟ್ಟುಗಳು ಹಾಳಾಗುತ್ತಿರುವುದು ಬೇಸರದ ಸಂಗತಿ.
 ಕೆ. ವಿಜಯ ಗೌಡ,
(ಜೀರ್ಣೋದ್ಧಾರ ಸಮಿತಿಯ
 ಪ್ರ. ಕಾರ್ಯದರ್ಶಿ ಆಗಿದ್ದವರು)

ಮುಂದುವರಿಸಬಹುದು
ದೇವಸ್ಥಾನಕ್ಕೆ ಭೇಟಿಯಿತ್ತಾಗ ಜೀರ್ಣೋದ್ಧಾರ ಸಮಿತಿಯ ಕೆಲವರು ರಾಜೀನಾಮೆ ನೀಡಿರುವುದು ಗಮನಕ್ಕೆ
ಬಂದಿದೆ. ಹಾಗಾಗಿ ಅನೂರ್ಜಿತಗೊಂಡ ಸಮಿತಿಯನ್ನು ಬರ್ಖಾಸ್ತುಗೊಳಿಸಿ ದೇವಸ್ಥಾನದ ಆಡಳಿತಕ್ಕೆ ಲೆಕ್ಕಪತ್ರ,
ಖಾತೆಗಳನ್ನು ಹಸ್ತಾಂತರಿಸುವಂತೆ ಆದೇಶಿಸಿದ್ದೇವೆಯೇ ಹೊರತು ಜೀರ್ಣೋದ್ಧಾರ ಸಮಿತಿಯಲ್ಲಿ
ಅವ್ಯವಹಾರ ಕಂಡುಬಂದಿಲ್ಲ. ನಿಂತಿರುವ ಕೆಲಸಗಳನ್ನು ವ್ಯವಸ್ಥಾಪನ ಸಮಿತಿ ಮುಂದುವರಿಸಿಕೊಂಡು
ಹೋಗಬಹುದು. ವ್ಯವಸ್ಥಾಪನ ಸಮಿತಿಗೆ ಜೀರ್ಣೋದ್ಧಾರ ಸಮಿತಿಯ ಅಗತ್ಯ ಕಂಡುಬಂದರೆ ಸಮಿತಿಯ ಸ್ಪಷ್ಟ
ಉದ್ದೇಶ ಹಾಗೂ ಅಭಿವೃದ್ಧಿ ಕಾರ್ಯಗಳ ಚಿತ್ರಣದೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಸೊತ್ತುಗಳು
ಹಾಳಾಗುತ್ತಿದೆ ಎಂದರೆ ಅದಕ್ಕೆ ವ್ಯವಸ್ಥಾಪನ ಸಮಿತಿಯೇ ನೇರ ಹೊಣೆ. 
ಪ್ರಮೀಳಾ,
ಸಹಾಯಕ ಆಯುಕ್ತರು,
ಧಾರ್ಮಿಕದತ್ತಿ ಇಲಾಖೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next