Advertisement

Dodnagudde temple; ಜೂನ್ 11ರಂದು ನಾಗ ತನು ತರ್ಪಣ ಮಂಡಲ, ಸುಬ್ರಮಣ್ಯ ಸ್ವಾಮಿ ವರ್ಧಂತಿ

03:33 PM Jun 09, 2024 | Team Udayavani |

ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಜೂನ್ 11ರಂದು ತನು ತರ್ಪಣ ಮಂಡಲ ಸೇವೆ ಮತ್ತು ಷಟ್ ಶಿರ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪ್ರತಿಷ್ಠ ವರ್ಧಂತಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ.

Advertisement

ನಾಗ ಸಾನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶ ಅಭಿಷೇಕ ಪವಮಾನ ಸೂಕ್ತ ಯಾಗ ಕಲಶಾಭಿಷೇಕ ನೆರವೇರಲಿದೆ. ಸಂಜೆ ಗಂಟೆ 5 ರಿಂದ ದೇವತಾ ಪ್ರಾರ್ಥನೆಯೊಂದಿಗೆ ನಾಗ ಸಾನಿಧ್ಯದಲ್ಲಿ ಹಾಲಿಟ್ಟು ಸೇವೆಯೊಂದಿಗೆ ನಾಗ ತನು ತರ್ಪಣ ಮಂಡಲ ಸೇವೆ ಆರಂಭಗೊಳ್ಳಲಿದೆ. ಕಲ್ಲಂಗಳ ರಾಮಚಂದ್ರ ಕುಂಚಿತ್ತಾಯ ಅವರಿಂದ ನಾಗ ಸಂದರ್ಶನ ನೆರವೇರಲಿದೆ.

ಸುಬ್ರಮಣ್ಯ ಸ್ವಾಮಿ ವರ್ಧಂತಿ ಪ್ರಯುಕ್ತ ಪಂಚ ವಿಂಸತಿ ಕಲಶಾರಾಧನೆ, ಪ್ರಧಾನ ಹೋಮ ಕಳಶಾಭಿಷೇಕ, ಶ್ರೀ ಸುಬ್ರಮಣ್ಯ ಸಹಸ್ರನಾಮ, ಪಾಯಸ ಹೋಮ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ ತಳಿಸಿರುತ್ತಾರೆ

Advertisement

Udayavani is now on Telegram. Click here to join our channel and stay updated with the latest news.

Next