ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರಿನಿಂದ ತುರ್ತಾಗಿ ನಾರಾವಿ ಕಡೆಗೆ ತೆರಳುತ್ತಿದ್ದ 108 ಅಂಬ್ಯಲೆನ್ಸ್ ನಡ್ತಿಕಲ್ಲುವಿನಲ್ಲಿ ರಸ್ತೆ ಬದಿಗೆ ಮಗುಚಿಬಿದ್ದ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರೋಗಿಯೊಬ್ಬರನ್ನು ಮೂಡಬಿದಿರೆಗೆ ಸಾಗಿಸುವ ಸಲುವಾಗಿ ತುರ್ತಾಗಿ ಕರೆ ಬಂದಿತ್ತು ಎನ್ನಲಾಗಿದೆ.
ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತುರ್ತಾಗಿ ಹೊರಟ ಅಂಬ್ಯುಲೆನ್ಸ್ ನಡ್ತಿಕಲ್ಲು ಬೆದ್ರಡ್ಡ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ತಕ್ಷಣ ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.