Advertisement

ವೇಣುಗೋಪಾಲ ಸ್ವಾಮಿ ಬ್ರಹ್ಮರಥೋತ್ಸವ

06:25 PM Apr 20, 2019 | Team Udayavani |

ಯಲಹಂಕ: ಇಲ್ಲಿನ ಕೋಟೆ ಬೀದಿಯ ವೇಣುಗೋಪಾಲ ಸ್ವಾಮಿಯ ಬ್ರಹ್ಮರಥೋತ್ಸವ ಶುಕ್ರವಾರ ವೈಭವದಿಂದ ನಡೆಯಿತು.

Advertisement

ವೇಣುಗೋಪಾಲ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ದೇವಸ್ಥಾನಗಳಿಗೆ ಕೊಂಡೂಯ್ದು ಪೂಜೆ ಸಲ್ಲಿಸಿ ನಂತರ ದೇವಾಲಯಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ಬಳಿಕ ಸ್ವಾಮಿಗೆ ವಿಶೇಷ ಪೂಜೆ, ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಮದ್ಯಾಹ್ನ 12.30ಕ್ಕೆ ಭಕ್ತರ ಜೈಕಾರ, ವೇದಘೋಷಗಳ ನಡುವೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು, ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆಯುವ ಮೂಲಕ ಹರಕೆ ತೀರಿಸಿದರು.

ಇದೇ ವೇಳೆ ದೇವಸ್ಥಾನದ ಸುತ್ತಮುತ್ತ ಪಾನಕ ಮಜ್ಜಿಗೆ ಹಾಗೂ ಕೊಸಂಬರಿ ವಿರತಿಸಲಾಯಿತು. ವೇಣುಗೋಪಾಲ ಸ್ವಾಮಿಯ ದರ್ಶನ ಪಡೆಯಲು ನೂರಾರು ಜನ ಸೇರಿದ್ದರು. ಸಂಜೆ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next