Advertisement
ಏನಿದು ಸಮಸ್ಯೆ?ಯಡ್ತರೆ ಗ್ರಾಮದ ಹಡವಿನಗದ್ದೆ ಎಂಬಲ್ಲಿ ಎರಡು ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ 1.31 ಕೋಟಿ ರೂ. ಅನುದಾನದ ವೆಂಟೆಡ್ ಡ್ಯಾಮ್ ನಿರ್ಮಿಸಲಾಗಿತ್ತು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿಯೆ ಪ್ರಪ್ರಥಮ ಬಾರಿ ವಿನೂತನ ತಂತ್ರಜ್ಞಾನ ಹಾಗೂ ವಿನ್ಯಾಸದಲ್ಲಿ ಇದನ್ನು ರೂಪುಗೊಳಿಸಲಾಗಿತ್ತು. ಕೊಸಳ್ಳಿ ಜಲಪಾತದಿಂದ ಹರಿಯುವ ತೂದಳ್ಳಿ ಹೊಳೆ ಸಂಕದಗುಂಡಿ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. 1980ರ ದಶಕದಲ್ಲಿ ಹಡವಿನಗದ್ದೆ ಎಂಬಲ್ಲಿ ದೂರದೃಷ್ಟಿತ್ವದ ಚಿಂತನೆಯೊಂದಿಗೆ ಸುಮಾರು 400 ಮೀಟರ್ ಉದ್ದದ ಚೆಕ್‌ಡ್ಯಾಮ್ ನಿರ್ಮಿಸಿದ್ದರೂ ನದಿಯ ನೀರಿನ ಅಬ್ಬರ ಹಾಗೂ ಸೆಳೆತದ ನಡುವೆ ಕಾಲ ಕ್ರಮೇಣ ಕಿರು ಸೇತುವೆ ಶಿಥಿಲಗೊಂಡು ಅವಸಾನಗೊಂಡಿತ್ತು. ಈ ಭಾಗದಲ್ಲಿ ವೆಂಟೆಡ್ ಡ್ಯಾಮ್ ನಿರ್ಮಿಸಿ ಸುಮಾರು 3 ಕಿ.ಮೀ. ಕಾಲುವೆ ಮೂಲಕ ನೀರು ಕೊಂಡೋಯಲಾಗುತ್ತಿತ್ತು. ಇದರಿಂದ ಕೇಸ್ನಿ, ಆಲಂದೂರು, ಜೋಗೂರು, ಶಿರೂರಿನವರೆಗೆ ಕೃಷಿಗೆ ಹಾಗೂ ಸುಗ್ಗಿ ಬೆಳೆಗೆ ಅನುಕೂಲವಾಗುತ್ತಿತ್ತು. ಉದಯವಾಣಿ ಈ ಕುರಿತು ಹಲವು ಬಾರಿ ವರದಿ ಪ್ರಕಟಿಸಿತ್ತು.
ಕಾಮಗಾರಿ ಮುಗಿದ ಬಳಿಕ ಚುನಾವಣೆ ಘೋಷಣೆಯಾಗಿ ಬಳಿಕ ಜನಪ್ರತಿನಿಧಿಗಳ ಬದಲಾವಣೆಯಾಯಿತು. ಆದರೆ ಈ ವೆಂಟೆಂಡ್ ಡ್ಯಾಮ್ ಇದುವರೆಗೆ ಅಧಿಕೃತವಾಗಿ ಉದ್ಘಾಟನಾ ಭಾಗ್ಯ ಕಂಡಿಲ್ಲ. ಗುತ್ತಿಗೆದಾರರು ಸಹ ಈ ಕಡೆ ಕಣ್ಣೆತ್ತಿ ನೋಡಲಿಲ್ಲ.ಇದರಿಂದಾಗಿ ಮಳೆಗಾಲದಲ್ಲಿ ಕಾಲುವೆಯಲ್ಲಿ ಮಣ್ಣು ಶೇಖರಣೆಗೊಂಡು ಕೋಟ್ಯಂತರ ರೂಪಾಯಿ ಅನುದಾನ ಗುತ್ತಿಗೆದಾರರ ಕಳಪೆ ನಿರ್ವಹಣೆಯಿಂದ ನೀರು ಪಾಲಾಗಿದೆ.
Related Articles
Advertisement
ನೀರಾವರಿಗೆ ವಿಶೇಷ ಪ್ರಾಧಾನ್ಯವೆಂಟೆಡ್ ಡ್ಯಾಂ ಬಹುತೇಕ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು, ನಿರ್ವಹಣೆ ಕೊರತೆಯಿಂದ ಕೃಷಿಕರಿಗೆ ತೊಂದರೆಯಾಗುತ್ತಿರುವುದರ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕಳಪೆ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯವನ್ನು ಸಹಿಸಲಾಗದು. ಕೃಷಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುತ್ತೇನೆ. ನೀರಾವರಿಗೆ ವಿಶೇಷ ಪ್ರಾಧಾನ್ಯ ನೀಡಲಾಗುವುದು.
-ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು -ಅರುಣ ಕುಮಾರ್, ಶಿರೂರು