Advertisement

15 ಲಕ್ಷ  ರೂ. ಮೊತ್ತದ ವೆಂಟಿಲೇಟರ್‌ ವಿತರಣೆ

07:17 PM May 31, 2021 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ರೋಗಿಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಇಲ್ಲಿಯ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌)ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರು 15 ಲಕ್ಷ ರೂ. ಮೊತ್ತದ ಮೂರು ವೆಂಟಿಲೇಟರ್‌ ನೀಡಿದರು.

Advertisement

ಧರ್ಮಸ್ಥಳ ಸಂಘದವರು ಒದಗಿಸಿರುವ ಮೂರು ವೆಂಟಿಲೇಟರ್‌ ಶಾಸಕರಾದ ಅನಿಲ್‌ ಬೆನಕೆ ಹಾಗೂ ಅಭಯ ಪಾಟೀಲ ಹಸ್ತಾಂತರಿಸಿದರು. ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ವಿನಂತಿ ಮೇರೆಗೆ ಧರ್ಮಸ್ಥಳ ಸಂಘದವರು 3 ವೆಂಟಿಲೇಟರ್‌ ನೀಡಿದ್ದಾರೆ. ಅವುಗಳನ್ನು ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರು ಗೆ ಶುಕ್ರವಾರ ಹಸ್ತಾಂತರಿಸಿದರು.

ಇದೇ ರೀತಿ ರಾಜ್ಯದ ಎಲ್ಲ ಕಡೆಗಳಿಗೂ ವೆಂಟಿಲೇಟರ್‌ ಗಳನ್ನು ನೀಡುತ್ತಿರುವ ಧರ್ಮಸ್ಥಳದ ಧರ್ಮಾಧಿ ಕಾರಿ ವೀರೇಂದ್ರ ಹೆಗ್ಗಡೆ ಅವರು ಅಭಿನಂದನೆಗೆ ಅರ್ಹರು. ಆವರು ನೀಡುತ್ತಿರುವ ಸಾಮಾಜಿಕ ಸೇವೆ ರಾಜ್ಯದ ಜನತೆಗೆ ಅನುಕೂಲಕರವಾಗಿದೆ. ಇವರ ಸೇವೆ ಹೀಗೆಯೇ ಮುಂದುವರಿಯಲಿ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡರ ಮಾತನಾಡಿದರು. ಸುಮಾರು 75 ಲಕ್ಷ ಅಂದಾಜು ವೆಚ್ಚದಲ್ಲಿ ಪ್ರತಿ ನಿಮಿಷಕ್ಕೆ 500 ಲೀಟರ್‌ನಷ್ಟು ಆಮ್ಲಜನಕ ತಯಾರಿಕಾ ಘಟಕಕ್ಕೆ ಶಾಸಕರು ಚಾಲನೆ ನೀಡಿದರು. ಬಿಮ್ಸ್‌ ನಿರ್ದೇಶಕ ಡಾ| ವಿನಯ್‌ ದಾಸ್ತಿಕೊಪ್ಪ, ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ಪ್ರದೀಪ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next