Advertisement

ಶೀಘ್ರದಲ್ಲೇ ವೆಂಟಿಲೇಟರ್ ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಲಾಗುವುದು: ಪಿಎಂಸಿ

05:33 PM Jul 05, 2020 | Suhan S |

ಪುಣೆ, ಜು. 4: ಕೋವಿಡ್‌ ನಿರ್ಣಾಯಕ ಸೋಂಕಿತರ ಚಿಕಿತ್ಸೆಗೆ ಪುಣೆ ನಾಗರಿಕ ಆಡಳಿತವು ತನ್ನ ವೆಂಟಿಲೇಟರ್‌ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಪುಣೆ ಪುರಸಭೆ ಆಯುಕ್ತ ಶೇಖರ್‌ ಗಾಯಕ್ವಾಡ್‌ ಹೇಳಿದ್ದಾರೆ.

Advertisement

ಮುಂದಿನ 3 ವಾರಗಳಲ್ಲಿ ಒಟ್ಟು 450 ವೆಂಟಿಲೇ ಟರ್‌ ಹಾಸಿಗೆಗಳು ಲಭ್ಯವಾಗಲಿವೆ. ಖಾಸಗಿ ಆಸ್ಪತ್ರೆ ಗಳಲ್ಲಿರುವ ಸಾಕಷ್ಟು ವೆಂಟಿ ಲೇಟರ್‌ ಹಾಸಿಗೆಗಳನ್ನು ಪಿಎಂಸಿ ಹಂತ ಹಂತವಾಗಿ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಗಾಯಕ್ವಾಡ್‌ ಹೇಳಿದರು. ಪುಣೆ ಸ್ಮಾರ್ಟ್‌ ಸಿಟಿ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ಲಿಮಿಟೆಡ್‌ ಮತ್ತು ಪುಣೆ ಮುನ್ಸಿಪಲ್‌ ಕಾರ್ಪೊರೇಷನ್‌ ಜೂನ್‌ 19ರಿಂದ 30ರ ನಡುವಿನ ವರದಿಯನ್ನು ಪ್ರಕಟಿಸಿದ್ದು, ಜುಲೈ ಅಂತ್ಯದ ವೇಳೆ ವೆಂಟಿಲೇಟರ್‌ ಮತ್ತು ಐಸಿಯು ಹಾಸಿಗೆಗಳ ಕೊರತೆಯಾಗಬಹುದು ಎಂದಿದೆ. ವರದಿಯ ಪ್ರಕಾರ ಪುಣೆಯಲ್ಲಿ 202 ವೆಂಟಿಲೇಟರ್‌ ಹಾಸಿಗೆ ಮತ್ತು 400 ಐಸಿಯು ಹಾಸಿಗೆಗಳ ಕೊರತೆಯಿದೆ ಎನ್ನಲಾಗಿದೆ.

ಜುಲೈನಲ್ಲಿ ಪ್ರಕರಣಗಳು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ನಾಗರಿಕ ಮೂಲಸೌಕರ್ಯ ಸಿದ್ಧತೆಯನ್ನು ವರದಿ ತಿಳಿಸಿದೆ. ಜುಲೈ ಅಂತ್ಯದ ವೇಳೆಗೆ ಪುಣೆಯಲ್ಲಿ 47,796 ಪಾಸಿಟಿವ್‌ ಪ್ರಕರಣಗಳಿವೆ ಎಂದು ಅಂದಾಜಿಸಲಾಗಿದೆ, ಅದರಲ್ಲಿ 19,596 ಸಕ್ರಿಯ ಪ್ರಕರಣಗಳಾಗಿವೆ. ಪ್ರಸ್ತುತ ಪುಣೆಯಲ್ಲಿ ಒಟ್ಟು 18,556 ಹಾಸಿಗೆಗಳ ಸಾಮರ್ಥ್ಯವಿದೆ, ಇದರಲ್ಲಿ ಪಿಎಂಸಿ ಸ್ವಾಧೀನಪಡಿಸಿಕೊಂಡ ಅಥವಾ ಕಾಯ್ದಿರಿಸಿದ ಖಾಸಗಿ ಹಾಸಿಗೆ ಸೇರಿದೆ. ಆದ್ದರಿಂದ ಹಾಸಿಗೆಗಳ ತೀವ್ರ ಕೊರತೆಯಿದೆ. ಪ್ರಸ್ತುತ ಕೇವಲ 288 ಮಾತ್ರ ಇರುವುದರಿಂದ ವೆಂಟಿಲೇಟರ್‌ಗಳ ಸಂಖ್ಯೆಯು ನಾಗರಿಕ ಸಂಸ್ಥೆಗೆ ಕಳವಳಕಾರಿಯಾಗಿದೆ ಮತ್ತು ಜುಲೈ ಅಂತ್ಯದ ವೇಳೆಗೆ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ.

ಜುಲೈ ಅಂತ್ಯಕ್ಕೆ ಪರಿಸ್ಥಿತಿ ಭೀಕರ :  ವರದಿಯನ್ನು ಪರಿಗಣಿಸಿ ಮೇಯರ್‌ ಮುರ್ಲಿಧರ್‌ ಮೊಹೋಲ್‌ ಅವರು ಪಿಎಂಸಿ ಮುಖ್ಯಸ್ಥ, ಐಎಎಸ್‌ ಅಧಿಕಾರಿ ಸೌರಭ್‌ ರಾವ್‌ ಮತ್ತು ಹೆಚ್ಚುವರಿ ಆಯುಕ್ತರೊಂದಿಗೆ ಸಭೆ ನಡೆಸಿದರು. ಜುಲೈ ಅಂತ್ಯದ ವೇಳೆಗೆ ಪರಿಸ್ಥಿತಿ ಭೀಕರವಾಗಲಿದ್ದು,ನಮ್ಮ ಮೂಲಸೌಕರ್ಯವನ್ನು ಹೆಚ್ಚಿಸಲು ನಮಗೆ ಸಮಯವಿದೆ ಎಂದು ಮೊಹೋಲ್‌ ಹೇಳಿದರು. ಖಾಸಗಿ ಆಸ್ಪತ್ರೆಗಳಿಂದ ಗರಿಷ್ಠ ಹಾಸಿಗೆಗಳನ್ನು ಪಡೆದುಕೊಳ್ಳಲು ನಾನು ನಾಗರಿಕ ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಮತ್ತು ಆಯುಕ್ತರು ಶೀಘ್ರದಲ್ಲೇ ಅದಕ್ಕೆ ಆದೇಶ ಹೊರಡಿಸುತ್ತಾರೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next