Advertisement

ವೆಂಟಿಲೇಟರ್‌, ಆಕ್ಸಿಜನ್‌ಗಾಗಿ ವಾರ್‌ರೂಂಗೆ ನಿತ್ಯ ಕರೆ

06:56 PM May 09, 2021 | Team Udayavani |

ಮೈಸೂರು: ನಗರದ ಸಿದ್ದಾರ್ಥ ಬಡಾವಣೆಯಲ್ಲಿನನೂತನ ಜಿಲ್ಲಾಧಿಕಾರಿ ಕಟ್ಟಡದಲ್ಲಿ ಆರಂಭಿಸಿರುವಜಿಲ್ಲಾ ವಾರ್‌ ರೂಂಗೆ ಶನಿವಾರ ಕೋವಿಡ್‌-19ಟಾಸ್ಕ್ಫೋರ್ಸ್‌ನ ಹಾಸಿಗೆ ನಿರ್ವಹಣೆ ಸಂಚಾಲಕ ಎಚ್‌.ವಿ.ರಾಜೀವ್‌ ಹಾಗೂ ವಾರ್‌ ರೂಂ ಸಂಚಾಲಕಆರ್‌.ರಘು ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ಸಂದರ್ಭದಲ್ಲಿ ಹೆಲ್ಪ್ಲೈನ್‌ ನೋಡೆಲ್‌ಅಧಿಕಾರಿ ಮಂಜುನಾಥ್‌ ಮಾಹಿತಿ ನೀಡಿ, ಏಪ್ರಿಲ್‌28ರಿಂದ ನಗರದಲ್ಲಿ ಜಿಲ್ಲಾ ವಾರ್‌ ರೂಂಸ್ಥಾಪಿಸಲಾಗಿದ್ದು, ಮೇ 8ರ ಶನಿವಾರದ ಅಂತ್ಯಕ್ಕೆ 4,071 ಕರೆಗಳು ಬಂದಿವೆ. ನಿತ್ಯ 400ಕ್ಕಿಂತಹೆಚ್ಚು ಕರೆಗಳು ಬರುತ್ತಿವೆ. ವೆಂಟಿಲೇಟರ್‌ಗೆ 50,ಆಕ್ಸಿಜನ್‌ ಕೇಳಿಕೊಂಡು 100 ಕರೆಗಳು ಬರುತ್ತಿವೆ.ಕೋವಿಡ್‌ ಪಾಸಿಟಿವ್‌ ಇರುವವರು ಕರೆಮಾಡುತ್ತಿದ್ದಾರೆ. ಪರೀಕ್ಷೆ ಮಾಡಿಸಿ ವರದಿ ಲಭ್ಯವಾಗದ ನಾಗರಿಕರು ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಕರೆ ಮಾಡುವ ಎಲ್ಲರಿಗೂ ಅಗತ್ಯ ಮಾಹಿತಿ ರವಾನಿಸುತ್ತಿದ್ದೇವೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಮುಡಾ ಅಧ್ಯಕ್ಷ, ಕೋವಿಡ್‌ಟಾಸ್ಕ್ ಫೋರ್ಸ್‌ನ ಹಾಸಿಗೆ ನಿರ್ವಹಣೆ ಸಂಚಾಲಕಎಚ್‌.ವಿ.ರಾಜೀವ್‌, ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಾರ್ಡನ್‌ಗಳು ಮತ್ತು ಯೂತ್‌ ಸೇವಾ ಸಂಸ್ಥೆ ಸೇರಿ 30 ಸೇರಿವಾರ್‌ ರೂಂ ಕಾರ್ಯನಿರ್ವಹಣೆಗೆ 30 ಮಂದಿಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗಿದೆಎಂದು ತಿಳಿಸಿದರು.

ಕೋವಿಡ್‌ 2ನೇ ಅಲೆ ನಿರ್ವಹಣೆ ಸಂಬಂಧನಗರದಲ್ಲಿ ಸ್ಥಾಪಿಸಿರುವ ಜಿಲ್ಲಾ ವಾರ್‌ ರೂಂಗೆಶನಿವಾರದವರೆಗೆ 4 ಸಾವಿರಕ್ಕೂ ಅಧಿಕ ಕರೆಗಳುಬಂದಿವೆ. ಈ ಪೈಕಿ ವೆಂಟಿಲೇಟರ್‌ ಯಾವಆಸ್ಪತ್ರೆಯಲ್ಲಿ ಲಭ್ಯವಿದೆ. ಆಕ್ಸಿಜನ್‌ ಬೆಡ್‌ ಎಲ್ಲಿದೊರೆಯುತ್ತಿದೆ. ರೆಮ್‌ಡಿಸಿವಿರ್‌ ಇಂಜೆಕ Òನ್‌ಲಭ್ಯವಿದೆಯಾ? ಎಂಬುದು ವಾರ್‌ ರೂಂಗೆಬರುತ್ತಿರುವ ಕರೆಗಳು ಎಂದು ಹೇಳಿದರು.ಈ ವೇಳೆ ಸಾರ್ವಜನಿಕ ಗ್ರಂಥಾಲಯ ಇಲಾಖೆಉಪ ನಿರ್ದೇಶಕ ಮಂಜುನಾಥ್‌, ಆಯುಷ್‌ಇಲಾಖೆ ಉಪ ನಿರ್ದೇಶಕ ಡಾ. ಸೀತಾಲಕ್ಷ್ಮೀ,ಉಪ ವಿಭಾಗಾಧಿಕಾರಿ ವೆಂಕಟರಾಜು, ಸರ್ಕಾರಿಆಸ್ಪತ್ರೆಗಳ ಬೆಡ್‌ ಉಸ್ತುವಾರಿ ಡಾ. ಸಿ. ರವಿ, ಖಾಸಗಿಆಸ್ಪತ್ರೆಗಳ ನೋಡೆಲ್‌ ಅಧಿಕಾರಿ ಡಾ. ಅಶೋಕ್‌ಕರ್ನಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next