Advertisement

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

11:06 PM Jun 14, 2021 | Team Udayavani |

ಬೆಂಗಳೂರು : ವಿಶ್ವ ಟೆಸ್ಟ್‌ ಫೈನಲ್‌ನಲ್ಲಿ ಹಿರಿಯ ವೇಗಿ ಇಶಾಂತ್‌ ಶರ್ಮ ಅವರ ಅನುಭವ ಭಾರತಕ್ಕೆ ನೆರವಾಗಲಿದೆ ಎಂದು ಮಾಜಿ ಪೇಸ್‌ ಬೌಲರ್‌ ವೆಂಕಟೇಶ ಪ್ರಸಾದ್‌ ಹೇಳಿದ್ದಾರೆ.

Advertisement

“ಎರಡು ಅತ್ಯುತ್ತಮ ತಂಡಗಳು ಫೈನಲ್‌ನಲ್ಲಿ ಸೆಣಸುತ್ತಿವೆ. ಅದು ಬ್ಯಾಟಿಂಗ್‌ ಅಥವಾ ಸೀಮಿಂಗ್‌ ಟ್ರ್ಯಾಕ್‌ ಆಗಿರಲಿ, ಭಾರತದ ಮೇಲು ಗೈಗೆ ಸರಳ ಕಾರಣಗಳಿವೆ. ಇಬ್ಬರು ಉನ್ನತ ದರ್ಜೆಯ ಆಲ್‌ರೌಂಡರ್‌ಗಳಿದ್ದಾರೆ. ವಿಶ್ವ ದರ್ಜೆಯ ಸ್ಪಿನ್ನರ್‌ಗಳ ಜತೆಗೆ ಈಗ ವಿಶ್ವ ಮಟ್ಟದ ಪೇಸ್‌ ಬೌಲರ್ ಕೂಡ ಇದ್ದಾರೆ. ವೇಗಿ ಇಶಾಂತ್‌ ಶರ್ಮ ಅವರ ಅನುಭವ ಖಂಡಿತ ತಂಡದ ನೆರವಿಗೆ ಬರಲಿದೆ’ ಎಂದು ಕರ್ನಾಟಕದ ಮಾಜಿ ಕ್ರಿಕೆಟಿಗೆ “ವೆಂಕಿ’ ಅಭಿಪ್ರಾಯಪಟ್ಟರು.

“ಬ್ಯಾಟಿಂಗ್‌ ಸರದಿ ಬಲಿಷ್ಠವಾಗಿದೆ. 350 ರನ್ನಿಗೇನೂ ಕೊರತೆ ಕಾಡದು. ಹೀಗಾಗಿ ತಂಡ ಹೆಚ್ಚು ಸಂತುಲಿತ ಎಂದೇ ಭಾವಿಸಬೇಕು. ಆಗ ಪಿಚ್‌ ಹೇಗೆ ಇದ್ದರೂ ಸಮಸ್ಯೆಯಲ್ಲ…’ ಎಂಬುದು ಪ್ರಸಾದ್‌ ಅಭಿಪ್ರಾಯ.

ಇದನ್ನೂ ಓದಿ:ಸರಕಾರಿ ಕೆಲಸಕ್ಕೆ ಗೈರಾಗಿ ತನ್ನ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!

ಬೌಲಿಂಗ್‌ ಕಾಂಬಿನೇಶನ್‌
ಇಶಾಂತ್‌ ಶರ್ಮ, ಶಮಿ, ಬುಮ್ರಾ, ಅಶ್ವಿ‌ನ್‌, ರವೀಂದ್ರ ಜಡೇಜ-ಇದು ಫೈನಲ್‌ ಪಂದ್ಯಕ್ಕಾಗಿ ಪ್ರಸಾದ್‌ ಆರಿಸಿದ ಭಾರತದ ಬೌಲಿಂಗ್‌ ಕಾಂಬಿನೇಶನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next