ಮುಂಬಯಿ: ಬಿಸಿಸಿಐನ ಕ್ರಿಕೆಟ್ ಕಾರ್ಯಾಚರಣೆಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಭಾರತದ ಮಾಜಿ ವೇಗದ ಬೌಲರ್, ಕರ್ನಾಟಕದ ವೆಂಕಟೇಶ ಪ್ರಸಾದ್ ಆಯ್ಕೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಭಾರತದ ಕಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಪ್ರಸಾದ್, ಈ ಹುದ್ದೆಗೆ ಬೇಕಾದ ಎಲ್ಲ ಅರ್ಹತೆ ಹೊಂದಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಎಂ.ವಿ. ಶ್ರೀಧರ್ ಅವರ ನಿಧನ ದಿಂದ ಈ ಸ್ಥಾನ ತೆರವಾಗಿದ್ದು, ಬಿಸಿಸಿಐ ಯೋಗ್ಯ ವ್ಯಕ್ತಿಯ ಹುಡು ಕಾಟದಲ್ಲಿದೆ.
ವೆಂಕಟೇಶ ಪ್ರಸಾದ್ ಭಾರತದ ಬೌಲಿಂಗ್ ಕೋಚ್ ಆಗಿ ಗಮನ ಸೆಳೆದಿದ್ದಾರೆ. 33 ಟೆಸ್ಟ್ ಮತ್ತು 161 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.