Advertisement
ನಗರದ ಮೈಲಾಪುರ ಬೇಸ್ ನಿಂದ ಚಕ್ಕರಕಟ್ಟ ಮುಖಾಂತರ, ಗಾಂಧಿ ವೃತ್ತದಲ್ಲಿ ಮಹಾತ್ಮಾ ಗಾಂ ಧಿ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಮಾತನಾಡಿದ ವೆಂಕಟರೆಡ್ಡಿ ಮುದ್ನಾಳ, ಚುನಾವಣೆಯಲ್ಲಿ ಈ ಬಾರಿ ನನ್ನನ್ನು ಬಹುಮತದಿಂದ ಗೆಲ್ಲಿಸಬೇಕು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಎಲ್ಲಾ ಜಾತಿ ಧರ್ಮವರನ್ನು ಸಮಾನಾಗಿಕಾಣುವ ದೃಷ್ಟಿಕೋನ ನನ್ನದು, ಸಬ್ ಕಾ ಸಾಥ ಸಬ್ ಕಾ ವಿಕಾಸ್ ಎನ್ನುವ ಮಂತ್ರ ಭಾರತೀಯ ಜನತಾ ಪಕ್ಷ ನನಗೆ ಹಾಕಿಕೊಟ್ಟಿರುವ ಮೂಲಮಂತ್ರವಾಗಿದೆ ಎಂದರು.
ಶರಣಭೂಪಾಲರಡ್ಡಿ ನಾಯ್ಕಲ್, ದೇವಿಂದ್ರನಾಥ ನಾದ, ಖಂಡಪ್ಪ ದಾಸನ, ಬಸವರಾಜ ಚಂಡ್ರಿಕಿ, ಉಮಾರಡ್ಡಿಗೌಡ
ನಾಯ್ಕಲ್, ಬಸವರಾಜ ಪಾಟೀಲ ಬಿಳಾರ, ಚನ್ನಾರಡ್ಡಿ ಪಾಟೀಲ ಬಿಳಾರ, ಮಲ್ಲಣಗೌಡ ಹತ್ತಿಕುಣಿ, ಮಹೇಶಗೌಡ ಮುದ್ನಾಳ, ಹಣಮಂತ ಇಟಗಿ, ಗೋಪಾಲ ದಾಸನಕೇರಿ, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ವಿನಾಯಕ ಮಾಲಿಪಾಟೀಲ, ರುದ್ರುಗೌಡ ಪಾಟೀಲ, ರವಿ ಬಾಪುರೆ, ಮಲ್ಲಿಕಾರ್ಜುನರಡ್ಡಿ, ಮೋಹನ ಬಾಬು, ಸುರೇಶ ಕೊಟಿಮನಿ,
ಶಂಕ್ರಪ್ಪಗೌಡ ಗೋನಾಲ, ವೀಣಾ ಮೋದಿ, ಸುನೀತಾ ಚವ್ಹಾಣ, ನಾಗರಾಜ ಬೀರನೂರ್, ಮಹೇಂದ್ರ ಕಂದಕೂರ, ಸೂಗರಡ್ಡಿ ಬಿಳಾರ, ಡಾ| ಶರಣರಡ್ಡಿ ಕೋಡ್ಲಾ, ವೆಂಕಟರೆಡ್ಡಿ ತಂಗಡಿಗಿ, ಎಸ್.ಪಿ. ನಾಡೇಕಾರ್, ಸುನೀತಾ ರಾಠೊಡ್ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
Related Articles
ಸುರಪುರ: ನಗರಸಭೆ ವ್ಯಾಪ್ತಿಯ ರಂಗಂಪೇಟ ತಿಮ್ಮಾಪುರ, ಹಸನಾಪುರ ದಿವಳಗುಡ್ಡ ವಣಿಕ್ಯಾಳ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡ ಗುರುವಾರ ರೋಡ್ ಶೋ ನಡೆಸಿದರು.
Advertisement
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಸರಕಾರ ಬದಲಿಸಿ ಬಿಜೆಪಿ ಬೆಂಬಲಿಸಿ ಘೋಷಣೆ ಕೂಗಿದರು. ಈ ವೇಳೆ ರಾಜುಗೌಡ ಮಾತನಾಡಿ, ಹೆದರಿಸುವುದ ಬೆದರಿಸುವುದು ಭಯದ ವಾತಾವರಣ ನಿರ್ಮಿಸುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಇದಕ್ಕೆಲ್ಲ ರಾಜುಗೌಡ ಹೆದರುವುದಿಲ್ಲ. ಕಾರ್ಯಕರ್ತರೂ ಕೂಡ ಹೆದರುವ ಅಗತ್ಯವಿಲ್ಲ. ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಿ ಶಾಂತಿ ಮತ್ತು ಸೌರ್ಹಾದ ವಾತಾವರಣಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.
ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ನನಗೆ ವ್ಯಕ್ತವಾಗುತ್ತಿರುವ ಬೆಂಬಲ ಸಹಿಸಲಾಗದೆ ಕಾಂಗ್ರೆಸ್ ನವರು ಸೋಲಿನ ಹತಾಶೆಯಿಂದ ನನ್ನ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇದನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ. ದೌರ್ಜನ್ಯ ಹತ್ತಿಕ್ಕುವುದು ನನ್ನ ಮೊದಲ ಸಂಕಲ್ಪ. ಇದಕ್ಕೆ ತಾವು ಸಹಕರಿಸಿ ನನಗೆ ಮತನೀಡಿ ಗೆಲ್ಲಿಸಿ ಎಂದರು. ಮುಖಂಡರಾದ ಸುರೇಶ ಸಜ್ಜನ್, ರಾಜಾ ಹಣಮಪ್ಪ ನಾಯಕ ತಾತಾ, ಚಂದ್ರಶೇಖರ ಜಡಿಮರಳ, ಮಲ್ಲಿಕಾರ್ಜುನ ಕಡೇಚೂರ, ಹಣಮಂತ ಚಂದನಕೇರಿ, ವೀರಭದ್ರಪ್ಪ ಕುಂಬಾರ, ಭೀಮಾಶಂಕರ ಬಿಲ್ಲವ್, ಶ್ರೀರಂಗ ಮಿರಿಯಾಲ ಇದ್ದರು.