ಮಾಸ್ಕೋ: ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಬಾರದು ಎಂದು ಅಮೆರಿಕ ಫರ್ಮಾನು ಹೊರಡಿಸಿದ ಬಳಿಕ ವೆನಿಜುವೆಲಾದಿಂದ ಭಾರತ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅಲ್ಲಿನ ತೈಲ ಸಚಿವ ಮಾನ್ಯುವೆಲ್ ಕ್ಯುವೆಡೋ ಸದ್ಯ ಪ್ರತಿ ದಿನ ಭಾರತಕ್ಕೆ 3 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ರಫ್ತು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅದರ ಪ್ರಮಾಣವನ್ನು ದ್ವಿಗುಣಗೊಳಿಸಲಿದ್ದೇವೆ ಎಂದಿದ್ದಾರೆ. ಎರಡು ವಾರಗಳ ಹಿಂದಷ್ಟೇ ಅಮೆರಿಕ ಸರಕಾರ ವೆನಿಜುವೆಲಾದ ಮೇಲೆ ದಿಗ್ಬಂಧನ ಹೇರಿತ್ತು. ಇದರ ಹೊರತಾಗಿಯೂ ಅಲ್ಲಿನ ಸರಕಾರಿ ಸ್ವಾಮ್ಯದ ತೈಲ ಕಂಪೆನಿ ಪಿ.ಡಿ.ವಿ.ಎಸ್.ಎ. ಪ್ರತಿ ದಿನ 1.15 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ರಫ್ತು ಮಾಡುತ್ತಿದೆ. ಕಳೆದ ಸೋಮವಾರ ಎರಡು ಭಾರೀ ಗಾತ್ರದ ನೌಕೆಗಳು ವೆನಿಜುವೆಲಾದ ಜೋಸ್ ಟರ್ಮಿನಸ್‌ನಿಂದ ಕಚ್ಚಾ ತೈಲ ಹೇರಿಕೊಂಡು ಭಾರತದತ್ತ ಯಾನ ಶುರು ಮಾಡಿವೆ.