Advertisement
ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಹೋದ್ಯೋಗಿಗಳು, ಮಿತ್ರರು ಹಾಗೂ ಕುಟುಂಬ ಸದಸ್ಯರನ್ನೊಳಗೊಂಡ 31 ಮಂದಿಯ ನಮ್ಮ ತಂಡ ತಿರುಪತಿ- ವೆಲ್ಲೂರು ಪ್ರವಾಸಕ್ಕೆ ಮಂಗಳೂರಿನ ರೈಲು ನಿಲ್ದಾಣದಲ್ಲಿ ಸಜ್ಜಾಗಿ ನಿಂತೆವು. ಚೆನ್ನೈ ಎಕ್ಸ್ ಪ್ರಸ್ ರೈಲಿನಲ್ಲಿ ಸಂಜೆ ಹೊರಟ ನಾವು ಮರುದಿನ ಮುಂಜಾನೆ ತಮಿಳುನಾಡಿನ ಕಾಟ್ಪಾಡಿ ಜಂಕ್ಷನ್ ತಲುಪಿದೆವು.
Related Articles
Advertisement
ಇತಿಹಾಸದಲ್ಲೇನಿದೆ?ಶ್ರೀಪುರಂನ ನಾರಾಯಣೀ ಪೀಠದ ಶ್ರೀ ಶಕ್ತಿ ಅಮ್ಮನವರೇ ಈ ಅಪೂರ್ವ ಸ್ವರ್ಣ ದೇಗುಲದ ನಿರ್ಮಾತೃ. ಹಾಗಾಗಿಯೇ ಇಲ್ಲಿ ಅಂಬಿಕೆ ನಾರಾಯಣೀ ದೇವಿ ಶ್ರೀಶಕ್ತಿ ಅಮ್ಮನಾಗಿ ಭೂಲೋಕದಲ್ಲಿ ಅವತಾರ ತಾಳಿದರು ಎಂದು ಸ್ಥಳೀಯರು ನಂಬುತ್ತಾರೆ. ಅಪ್ರತಿಮ ಆಧ್ಯಾತ್ಮಿಕ ಸಾಧಕರಾಗಿರುವ ಶ್ರೀ ಶಕ್ತಿ ಅಮ್ಮನವರ ಅಸಾಧಾರಣ ಕಲ್ಪನಾ ಶಕ್ತಿಯಿಂದ ಮೂಡಿ ಬಂದಿರುವ ಈ ದೇವಸ್ಥಾನವನ್ನು ಇಷ್ಟೊಂದು ಆಕರ್ಷಕವಾಗಿ ನಿರ್ಮಿಸಲು 1500 ಕಿಲೋ ಶುದ್ಧ ಚಿನ್ನ ಬಳಸಲಾಗಿದೆಯಂತೆ. ಶ್ರೀ ಮಹಾಲಕ್ಷ್ಮೀಯ ದಿವ್ಯ ದರ್ಶನ ಭಾಗ್ಯ ಪಡೆಯಲು ನಕ್ಷತ್ರಾಕಾರದ ಉದ್ದನೆಯ ಮಂಟಪದಲ್ಲಿ ಸಾಗುವಾಗ ಕನ್ನಡ ಭಾಷೆ ಸಹಿತ ವಿವಿಧ ಭಾಷೆಗಳಲ್ಲಿ ಶ್ರೀ ಶಕ್ತಿ ಅಮ್ಮನ ಸ್ವರ್ಣ ವಾಕ್ಯಗಳಿರುವ ಫಲಕಗಳನ್ನು ಅಲ್ಲಲ್ಲಿ ನಾವು ಗಮನಿಸಬಹುದು. ಶ್ರೀ ಮಹಾಲಕ್ಷ್ಮೀ ಯ ದರ್ಶನ ಪಡೆದು ಹೊರ ಬಂದಾಗ ನಮ್ಮೆಲ್ಲರಲ್ಲೂ ವಿಶಿಷ್ಟ ಆಧ್ಯಾತ್ಮಿಕ ಅನುಭೂತಿ. ದೇಗುಲದ ಒಳಾಂಗಣದಲ್ಲಿ ಮೊಬೈಲ್ ಫೋನ್ ನಿಷೇಧವಾದ್ದರಿಂದ ಹೊರಭಾಗದಲ್ಲಿ ನಾವೆಲ್ಲ ಫೋಟೋ ಕ್ಲಿಕ್ಕಿಸಿ ಸಂತೃಪ್ತರಾ ದೆವು. ಬಳಿಕ ಬಸ್‌ನಲ್ಲಿ ಕಾಟ್ಪಡಿ ರೈಲು ನಿಲ್ದಾಣಕ್ಕೆ ಬಂದು ಸೇರಿದೆವು. ಹೊಟೇಲ್ ನಲ್ಲಿ ಪ್ಯಾಕ್ ಮಾಡಿ ತಂದಿದ್ದ ಊಟವನ್ನು ರೈಲಿನಲ್ಲೇ ಸವಿದು, ಪ್ರವಾಸವನ್ನು ಮೆಲುಕು ಹಾಕುತ್ತಾ ಸುಮಧುರ ನೆನಪಿನೊಂದಿಗೆ ಮರುದಿನ ಬೆಳಗ್ಗೆ 9 ಗಂಟೆಗೆ ಮಂಗಳೂರಿಗೆ ತಲುಪಿದೆವು. ರೂಟ್ ಮ್ಯಾಪ್
· ಮಂಗಳೂರಿನಿಂದ ಚೆನ್ನೈಗೆ ತೆರಳುವ ರೈಲಿನಲ್ಲಿ ಕಾಟ್ಪಾಡಿಗೆ ಸುಮಾರು 14 ಗಂಟೆಗಳ ಪ್ರಯಾಣ.
· ಕಾಟ್ಪಾಡಿ ಜಂಕ್ಷನ್ ನಿಂದ 10 ಕಿ.ಮೀ. ದೂರದಲ್ಲಿದೆ ವೆಲ್ಲೂರು ದೇವಸ್ಥಾನ.
· ಸಾಕಷ್ಟು ಬಸ್, ಖಾಸಗಿ ವಾಹನ ಸೌಲಭ್ಯಗಳಿವೆ.
· ಮೊದಲೇ ವಸತಿ ಗೃಹ ಕಾಯ್ದಿರಿಸಿದರೆ ಸಮಸ್ಯೆಯಿಲ್ಲ. ಸತೀಶ್ ಶೆಟ್ಟಿ,
ಕೊಡಿಯಾಲ್‌ಬೈಲ್