Advertisement

ಫಾಸ್ಟ್‌ಟ್ಯಾಗ್‌ ಇಲ್ಲ ಅಂದ್ರೆ ದುಪ್ಪಟ್ಟು ಟೋಲ್‌ ಕಟ್ಟಿ!

10:08 AM Nov 21, 2019 | Team Udayavani |

ಹೊಸದಿಲ್ಲಿ: ಹೆದ್ದಾರಿಗಳ ಟೋಲ್‌ಗ‌ಳಲ್ಲಿ ಆಗುತ್ತಿರುವ ವಿಳಂಬ, ನಗದು ರಹಿತ ವ್ಯವಹಾರ ಉತ್ತೇಜನಕ್ಕೆ ಫಾಸ್ಟ್‌ಟ್ಯಾಗ್‌ ಅನ್ನು ಡಿ.1ರಿಂದ ಕಡ್ಡಾಯ ಮಾಡಲಾಗುತ್ತಿದ್ದು, ಟ್ಯಾಗ್‌ ಇಲ್ಲದ ಎಲ್ಲ ವಾಹನಗಳು (ನಾಲ್ಕು ಮತ್ತು ಅದಕ್ಕಿಂತ ಹೆಚ್ಚು) ದುಪ್ಪಟ್ಟು ಟೋಲ್‌ ದರ ಪಾವತಿಸಬೇಕಾಗಿದೆ.

Advertisement

ಈಗಾಗಲೇ ಎಲ್ಲ ಟೋಲ್‌ಗ‌ಳಲ್ಲಿ ಫಾಸ್ಟ್‌ಟ್ಯಾಗ್‌ ಮೂಲಕ ಟೋಲ್‌ ಸ್ವೀಕಾರಕ್ಕೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು, ಈ ಕುರಿತ ಸ್ಕ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೇ ಮಾಲಕರು ವಾಹನಗಳ ಮುಂಭಾಗದ ಕನ್ನಡಿಯಲ್ಲಿ ಫಾಸ್ಟ್‌ಟ್ಯಾಗ್‌ ಅಳವಡಿಸಲು ಸೂಚನೆ ನೀಡಿದೆ. ಟ್ಯಾಗ್‌ ಅಳವಡಿಕೆಯನ್ನು ಕಡ್ಡಾಯ ಮಾಡಲು ಟ್ಯಾಗ್‌ ಅಳವಡಿಸದವರು ದುಪ್ಪಟ್ಟು ಮೊತ್ತ ಟೋಲ್‌ಗ‌ಳಲ್ಲಿ ಪಾವತಿಸಬೇಕಾಗುತ್ತದೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಶುಲ್ಕ ತಿದ್ದುಪಡಿ ನಿಯಮ ಪ್ರಕಾರ ಎಲ್ಲ ಟೋಲ್‌ಗ‌ಳಲ್ಲಿ ಲೇನ್‌ಗಳು ಫಾಸ್ಟ್‌ಟ್ಯಾಗ್‌ ಆಗಿರಬೇಕು. ಒಂದು ವೇಳೆ ಫಾಸ್ಟ್‌ಟ್ಯಾಗ್‌ ರಹಿತವಾಗಿದ್ದರೆ, ಅವರಿಗೆ ದುಪ್ಪಟ್ಟು ಶುಲ್ಕ ವಿಧಿಸಬೇಕು ಎಂದು ಕಾಯ್ದೆಯಲ್ಲೇ ಇದೆ. ಇದರೊಂದಿಗೆ ಅತಿ ದೊಡ್ಡ ಗಾತ್ರದ ವಾಹನಗಳಿಗೆ ಪ್ರತ್ಯೇಕ ಲೇನ್‌ ಇಡುವ ಬಗ್ಗೆಯೂ ಹೇಳಲಾಗಿದೆ. ಸದ್ಯ ಎಲ್ಲ ಟೋಲ್‌ಗ‌ಳಲ್ಲಿ ಫಾಸ್ಟ್‌ಟ್ಯಾಗ್‌ ಅಳವಡಿಸುವಂತೆ ಜನರಿಗೆ ಜಾಗೃತ್ತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next