Advertisement

ವಾಹನ ಮಾಲಕರೇ ಎಚ್ಚರ! ನಿಮ್ಮ ವಾಹನದಲ್ಲಿ ಜಾತಿ ಹೆಸರು ಕಂಡುಬಂದಲ್ಲಿ ವಶ ಖಚಿತ!

10:37 PM Dec 27, 2020 | sudhir |

ಲಕ್ನೋ: ಎಚ್ಚರಿಕೆ…ಇನ್ನು ಮುಂದೆ ವಾಹನಗಳಲ್ಲಿ ಪ್ರತಿಷ್ಠೆಯ ಸಂಕೇತವಾಗಿ ಜಾತಿಯ ಹೆಸರು ಹಾಕಿದರೆ ವಾಹನ ವಶಕ್ಕೆ ಪಡೆಯಲಾಗುತ್ತದೆ. ಇಂಥದ್ದೊಂದು ನಿಯಮ ಜಾರಿಯಾಗಿರುವುದು ಉತ್ತರ ಪ್ರದೇಶದಲ್ಲಿ.

Advertisement

ಮಹಾರಾಷ್ಟ್ರದ ಶಿಕ್ಷಕ ಹರ್ಷಲ್‌ ಪ್ರಭು, ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ವಿಚಾರವನ್ನು ತಂದ ನಂತರ ಈ ಬೆಳವಣಿಗೆಯಾಗಿದೆ. ಪ್ರಧಾನಿ ಕಚೇರಿ ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಈ ವಿಷಯ ತಿಳಿಸಿದೆ. ಕೂಡಲೇ ಸಚಿವಾಲಯ ಉತ್ತರಪ್ರದೇಶ ಸಾರಿಗೆ ಸಂಸ್ಥೆಗೆ ಈ ಸಂಬಂಧ ಸೂಚನೆ ನೀಡಿ, ಜಾತಿ ಹೆಸರನ್ನು ಹೊತ್ತ ವಾಹನಗಳನ್ನು ವಶಕ್ಕೆ ಪಡೆಯಲು ಆದೇಶ ನೀಡಲಾಗಿದೆ.

ಜಾತಿ ಹೆಸರನ್ನು ವಾಹನಗಳ ನೋಂದಣಿಸಂಖ್ಯೆ ಬಳಿ, ಇನ್ನಿತರ ಜಾಗಗಳಲ್ಲಿ ಹಾಕುವುದರಿಂದ ಸಾಮಾಜಿಕ ಸಂರಚನೆಗೆ ಧಕ್ಕೆಯಾಗುತ್ತದೆ ಎಂದು ಹರ್ಷಲ್‌ ಪ್ರಭು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಇದನ್ನೂ ಓದಿ:ವಿಷ್ಣುವರ್ಧನ್‌ ಪ್ರತಿಮೆ ಧ್ವಂಸ ಖಂಡಿಸಿ ನಟ ಕಿಚ್ಚ ಸುದೀಪ್‌ ಟ್ವೀಟ್‌

ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಯಾದವ್‌, ಬಹುಜನ ಸಮಾಜವಾದಿ ಪಕ್ಷ ಇದ್ದಾಗ ಜಾಟ್‌, ಪ್ರಸ್ತುತ ಯೋಗಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಠಾಕೂರ್‌, ಕ್ಷತ್ರಿಯ ಹೆಸರು ಹೆಚ್ಚಾಗಿ ಕಾಣಿಸುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next