Advertisement

ರಾಷ್ಟ್ರಪತಿ, ಉಪರಾಷ್ಟ್ರಪತಿ ಕಾರಿಗೂ ರಿಜಿಸ್ಟ್ರೇಶನ್‌ ನಂಬರ್‌ ಕಡ್ಡಾಯ

07:20 PM Jul 18, 2018 | udayavani editorial |

ಹೊಸದಿಲ್ಲಿ : ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳ ಅಧಿಕೃತ ಕಾರುಗಳು ಕೂಡ ರಿಜಿಸ್ಟ್ರೇಶನ್‌ ನಂಬರ್‌  ಕಡ್ಡಾಯವಾಗಿ ಹೊಂದಿರತಕ್ಕದ್ದು ಎಂದು ದಿಲ್ಲಿ ಹೈಕೋರ್ಟ್‌ ಇಂದು ಬುಧವಾರ ಹೇಳಿದೆ.

Advertisement

ದೇಶದ ಉನ್ನತ ಸಾಂವಿಧಾನಿಕ ಅಧಿಕಾರಿಗಳಾಗಿರುವ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರು, ಲೆಫ್ಟಿನೆಂಟ್‌ ಗವರ್ನರ್‌ಗಳು ಬಳಸುವ ಅಧಿಕೃತ ಕಾರುಗಳನ್ನು ಕೂಡ ಸಂಬಂಧಿತ ಪ್ರಾಧಿಕಾರಗಳಲ್ಲಿ ನೋಂದಾವಣೆಗೊಂಡು ಕಡ್ಡಾಯವಾಗಿ ರಿಜಿಸ್ಟ್ರೇಶನ್‌ ನಂಬರ್‌ ಹೊಂದಿರತಕ್ಕದ್ದು ಎಂದು ದಿಲ್ಲಿ ಹೈಕೋರ್ಟ್‌ ಹೇಳಿತು. 

ಈ ಎಲ್ಲ ಉನ್ನತರ ಅಧಿಕೃತ ಕಾರುಗಳ ರಿಜಿಸ್ಟ್ರೇಶನ್‌ ನಂಬರ್‌ಗಳನ್ನು ಅವರ ವಾಹನಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಕೋರ್ಟ್‌ ಹೇಳಿತು. 

ದೇಶದ ಸಾಂವಿಧಾನಿಕ ಉನ್ನತರು ಬಳಸುವ ಕಾರುಗಳಲ್ಲಿ ಸರಕಾರದ ಲಾಂಛನ ಮಾತ್ರವೇ ಇರುತ್ತದೆ. ರಿಜಿಸ್ಟ್ರೇಶನ್‌ ನಂಬರ್‌ ಇರುವುದಿಲ್ಲ. ಆದುದರಿಂದ ಈ ವಾಹನಗಳು ಸಾಂವಿಧಾನಿಕ ಉನ್ನತರ ಕಾರುಗಳೆಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಹಾಗಾಗಿ ಈ ವಾಹನಗಳು ಭಯೋತ್ಪಾದಕರ ಅಥವಾ ಯಾವುದೇ ದುರುದ್ದೇಶ ಹೊಂದಿರುವ ವ್ಯಕ್ತಿಗಳ ದುಷ್ಕೃತ್ಯಗಳಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ; ಆದುದರಿಂದ ಈ ವಾಹನಗಳಿಗೆ ಇತರ ಎಲ್ಲ ವಾಹನಗಳಂತೆ ರಿಜಿಸ್ಟ್ರೇಶನ್‌ ನಂಬರ್‌ ಇರುವುದು ಅಗತ್ಯ ಎಂಬ ಅಭಿಪ್ರಾಯದೊಂದಿಗೆ ಸರಕಾರೇತರ ಸೇವಾ ಸಂಘಟನೆಯೊಂದು ಸಲ್ಲಿಸಿದ ಅರ್ಜಿಯ ಮೇಲೆ ದಿಲ್ಲಿ ಹೈಕೋರ್ಟ್‌ ಈ ತೀರ್ಪು ನೀಡಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next