Advertisement

“ವಾಹನ ಚಾಲಕರು ರಸ್ತೆ ಸುರಕ್ಷಾ ನಿಯಮ ಪಾಲಿಸಬೇಕು’

01:00 AM Mar 08, 2019 | Harsha Rao |

ಪೆರ್ಲ:ಪ್ರತಿಯೊಬ್ಬ ವಾಹನ ಚಾಲಕರು ರಸ್ತೆ ಸುರಕ್ಷಾ ನಿಯಮಗಳನ್ನು  ಅನುಸರಿಸುವುದು ಸ್ವರಕ್ಷಣೆಗೂ, ಸಾರ್ವಜನಿಕರ ರಕ್ಷಣೆಗೂ ಅತೀ ಆವಶ್ಯವಾಗಿದೆ. ವಾಹನಗಳನ್ನು ರಸ್ತೆಯಲ್ಲಿ  ಓಡಿಸುವಾಗ ರಸ್ತೆ ಸೂಚಕಗಳನ್ನು , ಸಿಗ್ನಲ್ಸ್‌ಗಳ ಸ್ಪಷ್ಟ  ಅರಿವು ಇದ್ದೂ  ಅದರ ಪಾಲನೆಯೂ ಆದರೆ ಬಹಳಷ್ಟು  ರಸ್ತೆ ಅಪಘಾತಗಳನ್ನು  ಕಡಿಮೆ ಮಾಡಬಹುದು ಎಂದು ರೀಜಿನಲ್‌ ಟ್ರಾನ್ಸ್‌ಪೊàರ್ಟ್‌ ಇಲಾಖೆಯ ಇನ್ಸ್‌ಪೆಕ್ಟರ್‌ ಟಿ.ವೈಕುಂಠನ್‌ ಹೇಳಿದರು.

Advertisement

ಪೆರ್ಲ ನಲಂದಾ ಕಾಲೇಜಿನ ಎನ್ನೆಸ್ಸೆಸ್‌ ಘಟಕದ ನೇತೃತ್ವದಲ್ಲಿ  ಮಾ.5ರಂದು ರಸ್ತೆ ಸುರಕ್ಷತೆಯ ಮಾಹಿತಿ ನೀಡುವ ಕಾರ್ಯ ಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 

ಅತೀ ವೇಗದ ಹಾಗೂ ಅಜಾಗರೂಕತೆಯ ಚಾಲನೆ,ಅಮಲು ಪದಾರ್ಥ ಸೇವಿಸಿ, ಸೀಟ್‌ ಬೆಲ್ಟ್ , ಹೆಲ್ಮೆಟ್‌ ರಹಿತ ಸವಾರಿ, ಲೈಸನ್ಸ್‌  ಹಾಗೂ ವಾಹನ ವಿಮೆ ರಹಿತ ಚಾಲನೆ ಮೊದಲಾದ ಕಾರಣಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಪ್ರಧಾನ ಕಾರಣ ಎಂದು ಹೇಳಿದರು.

ಯುವ ಜನತೆ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಾಹನ ಚಾಲನೆಯ ಸಂದರ್ಭದಲ್ಲಿ  ಸರಿಯಾದ ರೀತಿಯಲ್ಲಿ ನಿಯಮಗಳನ್ನು  ಪಾಲಿಸಿ ಎಂದು ಸೂಚಿಸಿದರು.

ಡಾ|ವಿಘ್ನೇಶ್ವರ ವರ್ಮುಡಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ರಾಜಶೇಖರ್‌,ರಸ್ತೆನಿಯಮಗಳನ್ನು  ಸರಕಾರವು ಅನುಷ್ಠಾನಕ್ಕೆ ತಂದದ್ದು ಜನರ ಸುರಕ್ಷತೆಗಾಗಿ ಎಂದು ಅವರು ಹೇಳಿದರು.

Advertisement

ಆರ್‌ಟಿಒ ಉಪ ನಿರೀಕ್ಷಕ ಗಣೇಶನ್‌,ಎನ್ನೆಸ್ಸೆಸ್‌ ಕಾರ್ಯದರ್ಶಿ ರೂಪಾ, ನಿಶ್ಚಿತಾ, ಸುದೀಶ್‌, ಭವ್ಯ ಮೊದಲಾದವರು ಉಪಸ್ಥಿತರಿದ್ದರು.  ಎನ್ನೆಸ್ಸೆಸ್‌ ಯೋಜನಾಧಿಕಾರಿ ಸುರೇಶ್‌ ಕೆ.ಸ್ವಾಗತಿಸಿ, ಸ್ನೇಹ ವಂದಿಸಿದರು. ಧನ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next