Advertisement
ಪರಿಸರ ಮಾಲಿನ್ಯದ ಪ್ರಶ್ನೆ ಬಂದಾಗ ಜನರು ಪಟಾಕಿ ಕಾರ್ಖಾನೆಗಳನ್ನು ನಿಷೇಧಿಸಬೇಕೆಂಬ ಕೂಗು ಎಬ್ಬಿಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಈ ಕ್ಷೇತ್ರದಲ್ಲಿ ಅಪಾರ ಉದ್ಯೋಗ ನಷ್ಟವಾಗುತ್ತದೆ. ಆ ಬಗ್ಗೆ ಜನರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದುದರಿಂದ ಸರಕಾರ ಅತ್ಯಧಿಕ ಪರಿಸರ ಮಾಲಿನ್ಯ ಉಂಟಾಗುವುದು ಮೋಟಾರು ವಾಹನಗಳಿಂದಲೋ ಅಥವಾ ಪಟಾಕಿ ಸುಡುವುದರಿಂದಲೋ ಎಂಬುದರ ತುಲನಾತ್ಮಕ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಜಸ್ಟಿಸ್ ಎಸ್ ಎ ಬೋಬಡೆ ಮತ್ತು ಜಸ್ಟಿಸ್ ಎಸ್ ಎ ನಜೀರ್ ಅವರನ್ನು ಒಳಗೊಂಡ ಪೀಠ ಹೇಳಿತು.
Related Articles
Advertisement
“ನೀವು ನಮಗೆ ನಿರುದ್ಯೋಗ ತಡೆಯುವ ವಿಧಾನಗಳ ಬಗ್ಗೆ ತಿಳಿಸಬೇಕು. ಜನರು ನಿರುದ್ಯೋಗಿಗಳಾಗಿ ಹಸಿವಿನಿಂದ ಇರುವುದನ್ನು ನಾವು ಬಯಸುವುದಿಲ್ಲ. ಸುಡು ಮದ್ದುಗಳನ್ನು ಬಳಸುವ ಇತರ ಕ್ಷೇತ್ರಗಳೂ ಇದ್ದಾವು’ ಎಂದು ಪೀಠ ಹೇಳಿತು.