ವಾಹನ ಬಳಸುವವರು ವಾಹನವೊಂದಕ್ಕೆ ಒಂದು ಗಿಡದಂತೆ ಬೆಳೆಸಬೇಕಿದೆ ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ
ಸಹಾಯಕ ಪರಿಸರ ಅಧಿಕಾರಿ ಡಾ| ಗಣಪತಿ ಹೆಗಡೆ ತಿಳಿಸಿದ್ದಾರೆ.
Advertisement
ನಗರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಭಾಗವಾಗಿ ಹೊಗೆರಹಿತ ವಾಹನ ನೆಮ್ಮದಿ ಜೀವನ ಎಂಬ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಒಂದು ವಾಹನಕ್ಕೆ ಒಂದು ಗಿಡ ಬೆಳೆಸುವ ಮೂಲಕ ವಾಯು ಮಾಲಿನ್ಯ ನಿಯಂತ್ರಿಸಲು ಮುಂದಾಗಬೇಕಿದೆ ಎಂದರು. ದೇಶದ ರಾಜಧಾನಿ ದೆಹಲಿ ಇದೀಗ ವಾಯು ಮಾಲಿನ್ಯದಿಂದಾಗಿ ಜನಜೀವನ ಕಷ್ಟ ಎಂಬಂತಹ ಸ್ಥಿತಿಗೆ ಬಂದಿದೆ. ವಾಯು ಮಾಲಿನ್ಯದಿಂದಾಗುವ ದುಷ್ಪರಿಣಾಮದಿಂದಾಗಿ ಜನರು ಹೊರಗೆ ಬರುವುದಕ್ಕೆ ಆತಂಕ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚು ಗಿಡ, ಮರ ಬೆಳೆಸುವುದರಿಂದ ಇಂಗಾಲಾಮ್ಲ ಸೇರಿದಂತೆ ಎಲ್ಲಾ ರೀತಿಯ ಅಸಹನೀಯ ಅನಿಲಗಳನ್ನು ಮರ ಹಿರಿಕೊಂಡು ಪರಿಶುದ್ಧವಾದ ಆಮ್ಲಜನಕ ಹೊರಹಾಕುತ್ತದೆ. ಇದರಿಂದ ಉತ್ತಮ ಉಸಿರಾಟದೊಂದಿಗೆ ಆರೋಗ್ಯ ಪೂರ್ಣ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ದೂರವಿರಬಹುದು ಎಂದು ಅವರು ತಿಳಿಸಿದರು. ಮೋಟಾರು ವಾಹನಗಳ ನಿರೀಕ್ಷಕ ಅನಿಲ್ ಕುಮಾರ್ ಮಾತನಾಡಿ, ನಾವಿಂದು ಗಿಡ, ಮರಗಳ ಬೆಳೆಸುವ ಅನಿವಾರ್ಯತೆಯನ್ನು ಪ್ರತಿಯೊಬ್ಬರಲ್ಲೂ ಮೂಡಿಸಬೇಕಿದೆ. ಮನೆಯಲ್ಲಿ ನಡೆಯುವ ಯಾವುದೇ ಶುಭ ಸಮಾರಂದಲ್ಲಿ ಸಸಿಗಳ ವಿತರಣೆ ಮಾಡುವ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು ಎಂದರು. ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಕೊಟ್ರೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಜಿ. ಶ್ರೀನಿವಾಸ್, ತಿಪ್ಪೇಸ್ವಾಮಿ, ಎಚ್.ಸಿ. ಹನುಮಂತಪ್ಪ, ಕೆ. ವಾಸುದೇವ್, ಎಂ. ಸುರೇಶ್ ವೇದಿಕೆಯಲ್ಲಿದ್ದರು.