ಅಮೃತಸರ : ಮೂಲಭೂತವಾದಿ ಸಿಖ್ ಬೋಧಕ ಮತ್ತು ಖಲಿಸ್ತಾನ್ ಸಹಾನುಭೂತಿ ಹೊಂದಿರುವ ಅಮೃತಪಾಲ್ ಸಿಂಗ್ ನನ್ನು ಹಿಡಿಯಲು ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ ಸರಕಾರ ಶನಿವಾರ ಅಮೃತಪಾಲ್ ವಿರುದ್ಧ ಶನಿವಾರ ಭಾರಿ ಕಾರ್ಯಾಚರಣೆ ಪ್ರಾರಂಭಿಸಿದೆ,ಪೊಲೀಸರು ಆತನ ನೇತೃತ್ವದ ಸಶಸ್ತ್ರ ಗುಂಪಿನ ಸದಸ್ಯರನ್ನು ಬಂಧಿಸಿದ್ದರು. ಅಮೃತಪಾಲ್ ಸಿಂಗ್ ಬಳಸಿದ್ದ ಕಾರು ಮತ್ತು ಮದ್ದುಗುಂಡುಗಳನ್ನ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಅಮೃತಪಾಲ್ ಸಿಂಗ್ ನನ್ನು ಹುಡುಕುತ್ತಿದ್ದೇವೆ ಮತ್ತು ನಾವು ಶೀಘ್ರದಲ್ಲೇ ಅವನನ್ನು ಬಂಧಿಸುತ್ತೇವೆ” ಎಂದು ಜಲಂಧರ್ ಪೊಲೀಸ್ ಕಮಿಷನರ್ ಕುಲದೀಪ್ ಸಿಂಗ್ ಚಾಹಲ್ ಶನಿವಾರ ತಡರಾತ್ರಿ ಜಲಂಧರ್‌ನ ನಾಕೋದರ್ ಬಳಿ ಸುದ್ದಿಗಾರರಿಗೆ ತಿಳಿಸಿದರು.
ಅಮೃತಪಾಲ್ ಸಿಂಗ್ ನ ನಾಲ್ವರು ಶಂಕಿತ ಆಪ್ತ ಸಹಾಯಕರನ್ನು ಪಂಜಾಬ್ ಪೊಲೀಸರು ದಿಬ್ರುಗಢಕ್ಕೆ ಕರೆದೊಯ್ದಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ “ಇದು ಪೊಲೀಸರಿಂದ ಪೊಲೀಸರಿಗೆ ಸಹಕಾರ” ಎಂದಿದ್ದಾರೆ.
ಅಜ್ನಾಲಾ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನಾವು ಈ ಕ್ರಮ ಕೈಗೊಂಡಿದ್ದೇವೆ. ಅಮೃತಪಾಲ್ ಸಿಂಗ್ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಆತನ 7 ಸಹಾಯಕರನ್ನು ಬಂಧಿಸಲಾಯಿತು. ಅವರಿಂದ ಆರು 12 ಶಸ್ತ್ರಾಸ್ತ್ರಗಳು ಮತ್ತು ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವೆಲ್ಲವೂ ಕಾನೂನುಬಾಹಿರವಾಗಿವೆ. ಅಮೃತಪಾಲ್ ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಮೃತಸರ ಗ್ರಾಮಾಂತರ ಎಸ್‌ಎಸ್‌ಪಿ ಸತೀಂದರ್ ಸಿಂಗ್ ಹೇಳಿದ್ದಾರೆ.
ನಿನ್ನೆ 7 ಮಂದಿಯನ್ನು ಬಂಧಿಸಲಾಗಿತ್ತು. ಕಳೆದ ರಾತ್ರಿ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ಎಫ್‌ಐಆರ್‌ನಲ್ಲಿ ಅಮೃತಪಾಲ್ ಸಿಂಗ್ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಸತೀಂದರ್ ಸಿಂಗ್ ಹೇಳಿದ್ದಾರೆ.
ಜಲಂಧರ್ ನಲ್ಲಿ ತಡೆಹಿಡಿದಾಗ ಪೊಲೀಸರ ಬಲೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಅಧಿಕಾರಿಗಳು ಹಲವಾರು ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದರು ಮತ್ತು ಭಾನುವಾರ ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಇಂಟರ್ನೆಟ್ ಮತ್ತು ಎಸ್ ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.