Advertisement
ಈ ರಸ್ತೆಯಲ್ಲಿ ಹೊಂಡಗಳು ಬಿದ್ದು, ಸುಮಾರು ಒಂದು ವರ್ಷ ಕಳೆದಿದೆ. ಈ ಹೊಂಡಗಳಿಗೆ ಸ್ಥಳೀಯರು ಕಲ್ಲು, ಮಣ್ಣು ಹಾಕಿ ತೇಪೆ ಹಾಕುತ್ತಿದ್ದಾರೆ, ವಿನಃ ಪೂರ್ಣ ಪ್ರಮಾಣದ ಕಾಮಗಾರಿ ಇನ್ನೂ ಆಗಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಇಲ್ಲದಿರುವುದು ಮಳೆಯ ನೀರು ರಸ್ತೆಯಲ್ಲಿಯೇ ಹರಿದು ಹೊಂಡಗಳು ಸೃಷ್ಟಿಯಾಗುತ್ತಿವೆ.
Related Articles
Advertisement
ಎಲ್ಲೆಂದರಲ್ಲಿ ಕಸ :
ಹಲವು ಸಂಘ-ಸಂಸ್ಥೆಗಳಿಂದ ವರ್ಷವಿಡೀ ಸ್ವಚ್ಛತೆ ಅಭಿಯಾನ ಕೈಗೊಂಡರು ಕೂಡ ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಕಸ ಬಿಸಾಡುವ ಪ್ರವೃತ್ತಿ ಮುಂದುವರಿದಿದೆ.
ರಸ್ತೆಯ ಇಕ್ಕೆಲಗಳಲ್ಲಿ ಕಸ, ಮದ್ಯದ ಬಾಟಲ್‌ಗಳು ಕಾಣಸಿಗುತ್ತವೆ. ಬಜಪೆ ಪೊಲೀಸ್ ಠಾಣೆ-ಮುರನಗರ ಜಂಕ್ಷನ್ ಹಳೆ ವಿಮಾನ ನಿಲ್ದಾಣ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಕಾಂಕ್ರೀಟ್ ಕಾಮಗಾರಿ ನಡೆಸಿದ ರಸ್ತೆಯಲ್ಲಿ ಏಕ ಕಾಲಕ್ಕೆ ಎರಡೂ ಕಡೆಗಳಿಂದ ವಾಹನ ಸಂಚಾರ ಮಾಡಲು ಕಷ್ಟಕರವಾಗಿದೆ. ಎದುರಿನಿಂದ ಬಂದ ವಾಹನಕ್ಕೆ ದಾರಿ ನೀಡಬೇಕಾದ ಸಂದರ್ಭ ರಸ್ತೆ ಬದಿಯಲ್ಲಿ ಒಂದೆಡೆ ನಿಲ್ಲಿಸಬೇಕಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಮಳೆಯ ನೀರು ನಿಂತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ. ಸಂತ ಜಾನ್ ಪ್ಲಾವ್ ದ್ವಿತೀಯ ಅವರ ಪುಣ್ಯ ಕ್ಷೇತ್ರ, ಫಾದರ್ ಮುಲ್ಲರ್ ಆಸ್ಪತ್ರೆ ಈ ರಸ್ತೆಯಲ್ಲಿ ಬದಿಯಲ್ಲಿರುವುದರಿಂದ ಈ ಮಾರ್ಗದಲ್ಲಿ ಹೆಚ್ಚಿನ ವಾಹನ ಸಂಚರಿಸುತ್ತಿವೆ. ರಸ್ತೆ ವಿಸ್ತರಣೆ, ಮಳೆ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ ಆಗಬೇಕಾಗಿದೆ.
ಬಜಪೆ-ಕೊಳಂಬೆ ಮುರನಗರ ಜಂಕ್ಷನ್‌ನಿಂದ ಹಳೆ ವಿಮಾನ ನಿಲ್ದಾಣದವರೆಗೆ ರಸ್ತೆಯಲ್ಲಿ ಹೊಂಡಗಳು ಬಿದ್ದ ಬಗ್ಗೆ ಜನರಿಂದ ಮನವಿಗಳು ಬಂದಿದ್ದವು. ಈ ರಸ್ತೆಯ ನಿರ್ವಹಣೆ ವಿಮಾನ ನಿಲ್ದಾಣ ಪ್ರಾಧಿಕಾರ ಮಾಡುತ್ತಿತ್ತು. ಈ ರಸ್ತೆ ದುರಸ್ಥಿಯ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅವರಲ್ಲಿ ಮಾತನಾಡಿ ದ್ದೇನೆ. ಭಾರೀ ಮಳೆಯಾಗುತ್ತಿರುವ ಕಾರಣ ತೇಪೆ ಕಾರ್ಯಕ್ಕೆ ಅಡಚಣೆಯಾಗಿದೆ. ಮುರನಗರದಲ್ಲಿ ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಈ ರಸ್ತೆಗೆ ತೇಪೆ ಹಾಕುವ ಕಾರ್ಯ ಶೀಘ್ರ ಮಾಡಲಾಗುವುದು. .– ಡಾ| ಭರತ್ ಶೆಟ್ಟಿ , ಶಾಸಕ
-ಸುಬ್ರಾಯ ನಾಯಕ್ ಎಕ್ಕಾರು