Advertisement

ಎಸ್‌ಬಿಐನಿಂದ ಅದಮ್ಯ ಚೇತನ ಸಂಸ್ಥೆಗೆ ವಾಹನ ದೇಣಿಗೆ

11:27 AM Mar 17, 2018 | Team Udayavani |

ಬೆಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಅದಮ್ಯ ಚೇತನ ಸಂಸ್ಥೆಗೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, 18 ಲಕ್ಷ ರೂ. ವೆಚ್ಚದ ವಿಶೇಷ ಸೌಲಭ್ಯ ಹಾಗೂ ವಿನ್ಯಾಸದ ವಾಹನವನ್ನು ದೇಣಿಗೆಯಾಗಿ ನೀಡಿದೆ.

Advertisement

ಜಕ್ಕೂರಿನಲ್ಲಿರುವ ಎಸ್‌ಬಿಐ ತರಬೇತಿ ಕೇಂದ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಅಧ್ಯಕ್ಷ ರಜನೀಶ್‌ ಕುಮಾರ್‌ ಅವರು ವಾಹನದ ಕೀಲಿ ಕೈಯನ್ನು ಅದಮ್ಯ ಚೇತನ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ತೇಜಸ್ವಿ ಅನಂತಕುಮಾರ್‌ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಜನೀಶ್‌ ಕುಮಾರ್‌, ಶಾಲಾ ಮಕ್ಕಳಿಗೆ ಮಧ್ಯಾಹ್ನ ಗುಣಮಟ್ಟದ ಬಿಸಿಯೂಟವನ್ನು ತಲುಪಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್‌ ವಿಶೇಷ ವಿನ್ಯಾಸದ ವಾಹನವನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡಿದೆ. ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ಸಿಕ್ಕರೆ ಅವರ ದೈಹಿಕ ಬೆಳವಣಿಗೆ ಮಾತ್ರವಲ್ಲದೇ ಮಾನಸಿಕ ಆರೋಗ್ಯ ತ್ತಮವಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಶಾಲಾ ಮಕ್ಕಳಿಗೆ ಬಿಸಿಯೂಟ ವಿತರಿಸುವ ಕಾರ್ಯಕ್ಕೆ ಬ್ಯಾಂಕ್‌ ನೆರವಾಗುವ ಮೂಲಕ ಮಕ್ಕಳ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಪೂರಕ ಕಲ್ಪಿಸುವ ಕಾರ್ಯಕ್ಕೆ ನೆರವಾದ ತೃಪ್ತಿ ಇದೆ ಎಂದು ತಿಳಿಸಿದರು. ಎಸ್‌ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ (ಬೆಂಗಳೂರು) ಫ‌ರೂಕಿಶಹದ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next