Advertisement

ರಾಯಚೂರು:ಅಂಗವಿಕಲರಿಗೆ ವಾಹನ ವಿತರಣೆ

06:32 PM Jan 15, 2021 | Team Udayavani |

ರಾಯಚೂರು: ಅಂಗವಿಕಲರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಸಲಹೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮಾನ್ವಿ ಕ್ಷೇತ್ರ ವ್ಯಾಪ್ತಿಯ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿ ಅವರು ಮಾತನಾಡಿದರು. ಅಂಗವಿಕಲರನ್ನು ಕೀಳಾಗಿ ನೋಡುವ ದೃಷ್ಠಿಕೋನ ಬದಲಾಗಬೇಕು. ಅವರನ್ನು ದೇವರಂತೆ ಕಾಣಬೇಕು. ಫಲಾನುಭವಿಗಳಿಗೆ ನೀಡಿರುವ ವಾಹನಗಳನ್ನು ಕುಟುಂಬಸ್ಥರು ಬಳಸಬಾರದು. ಮಾನ್ವಿತಾಲ್ಲೂಕಿನ 28, ಸಿರವಾರ ತಾಲ್ಲೂಕಿನ 24 ಫಲಾನುಭವಿಗಳಿಗೆ ಗ್ರಾಪಂ 14ನೇ ಹಣಕಾಸಿನ ಯೋಜನೆಯಡಿ ವಾಹನ ವಿತರಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ಉಪಕಾರ್ಯದರ್ಶಿ ಮಹ್ಮದ್‌ ಇಸ್ಮಾಯಿಲ್‌, ಯೋಜನಾಧಿಕಾರಿ ಡಾ| ಟಿ. ರೋಣಿ, ಸಿರವಾರ ತಾಪಂ ಅಧ್ಯಕ್ಷ ದೇವರಾಜ ನಾಯಕ, ಮಲ್ಲಿಕಾರ್ಜುನ, ರಾಜಾ ರಾಮಚಂದ್ರ ನಾಯಕ, ನಾಗರಾಜ ಬೋಗಾವತಿ, ಶರಣಬಸವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next